ADVERTISEMENT

ಗಾಂಧಿ ಹತ್ಯೆಯ ಚಿತ್ರಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:23 IST
Last Updated 20 ಮೇ 2018, 19:23 IST

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಮತ್ತು ಸ್ವಾತಂತ್ರ್ಯಾ ನಂತರ ದೇಶವಿಭಜನೆ ಕಾಲಘಟ್ಟದ ಸಂಘರ್ಷದ ಕಥಾವಸ್ತುವುಳ್ಳ ಚಲನಚಿತ್ರ ‘ಗಾಂಧಿ ಹತ್ಯಾ, ಏಕ್ ಸಾಜಿಶ್’ಗೆ (ಗಾಂಧೀ ಹತ್ಯೆ, ಒಂದು ಸಂಚು) ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಮಂಡಳಿ(ಎಫ್‌ಸಿಎಟಿ) ‘ಎ’ ಪ್ರಮಾಣಪತ್ರ ನೀಡಿದೆ.

ಚಲನಚಿತ್ರದಲ್ಲಿ ಮಾದಕ ನೃತ್ಯವೊಂದನ್ನು ಬಳಸಲಾಗಿದೆ. ಅದನ್ನು ಮತ್ತು ಎಂಟು ದೃಶ್ಯಗಳನ್ನು ತೆಗೆದು ಹಾಕುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಚಿತ್ರ ತಂಡಕ್ಕೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಚಿತ್ರ ತಂಡವು ಎಫ್‌ಸಿಎಟಿಯ ಮೊರೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT