ADVERTISEMENT

ಗಾಯಕ ಬಿಡುಗಡೆ:ಪಾಕ್ ಸಂತಸ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:05 IST
Last Updated 15 ಫೆಬ್ರುವರಿ 2011, 18:05 IST

ನವದೆಹಲಿ (ಪಿಟಿಐ): ಅಧಿಕ ನಗದು ಹೊಂದಿದ್ದಕ್ಕಾಗಿ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿದ್ದ ಪಾಕಿಸ್ತಾನದ ಹೆಸರಾಂತ ಗಾಯಕ ರಾಹತ್ ಫತೇ ಅಲಿಖಾನ್ ಅವರನ್ನು ಬಿಡುಗಡೆ ಮಾಡಿಸಲು ಕ್ರಮ ಕೈಗೊಂಡ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಪಾಕಿಸ್ತಾನ ಅಭಿನಂದನೆಗಳನ್ನು ಸಲ್ಲಿಸಿದೆ.

ಚಿದಂಬರಂ ಅವರಿಗೆ ದೂರವಾಣಿ ಕರೆ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿದ ಪಾಕಿಸ್ತಾನದ ಒಳಾಡಳಿತ ಸಚಿವ ರಹಮಾನ್ ಮಲಿಕ್, ಮುಂದಿನ ವಿಚಾರಣೆಯಲ್ಲಿ ರಾಹತ್ ಖಾನ್ ಭಾರತಕ್ಕೆ ಸಹಕಾರ ನೀಡಲಿದ್ದಾರೆಂಬ ಭರವಸೆ ನೀಡಿದ್ದಾರೆ.
 
1.24 ಲಕ್ಷ ಡಾಲರ್ ನಗದು ಮತ್ತು 18,600 ಡಾಲರ್ ಮೌಲ್ಯದ ಎರಡು ಡಿಮಾಂಡ್ ಡ್ರಾಫ್ಟ್‌ಗಳನ್ನು ಹೊಂದಿದ್ದ ರಾಹತ್ ಖಾನ್ ಅವರನ್ನು ಫೆ.13ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಸದ್ಯ ರಾಹತ್ ಅವರ ಪಾಸ್‌ಪೋರ್ಟ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತಷ್ಟು ವಿಚಾರಣೆಗಾಗಿ ಗುರುವಾರ ಕಂದಾಯ ಗುಪ್ತದಳ ನಿರ್ದೇಶಕರ ಮುಂದೆ ಹಾಜರಾಗಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT