
ಪ್ರಜಾವಾಣಿ ವಾರ್ತೆಗಾಂಧಿನಗರ (ಪಿಟಿಐ): ವಿವಾದಾತ್ಮಕ ‘ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ (ಜಿಸಿಟಿಒಸಿ) ನಿಯಂತ್ರಣ ಮಸೂದೆ’ಯನ್ನು ಮಂಗಳವಾರ ಗುಜರಾತ್ ವಿಧಾನಸಭೆಯಲ್ಲಿ ಬಹುಮತದ ಮೂಲಕ ಅಂಗೀಕರಿಸಲಾಯಿತು.
ಪೊಲೀಸರಿಗೆ ಆರೋಪಿಗಳ ದೂರವಾಣಿ ಕರೆಗಳ ಧ್ವನಿ ಮುದ್ರಣ ಮಾಡಿಕೊಳ್ಳಲು ಮತ್ತು ಅದನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ಒದಗಿಸಲು ಈ ಮಸೂದೆಯು ಅವಕಾಶ ಕಲ್ಪಿಸುತ್ತದೆ.
ಈ ವಿವಾದಾತ್ಮಕ ಮಸೂದೆಯನ್ನು ಮರು ಪರಿಶೀಲಿಸಿ ಎಂದು ಸೂಚಿಸಿ, ರಾಷ್ಟ್ರಪತಿಗಳು ಇದನ್ನು ಮೂರು ಬಾರಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಮಸೂದೆಗೆ ಪ್ರತಿಪಕ್ಷಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಮಂಗಳವಾರ ಬಹುಮತದ ಮೂಲಕ ಮಸೂದೆಗೆ ಅನುಮೋದನೆ ಪಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.