ADVERTISEMENT

ಗುಜರಾತ್‌: ಇಕ್ತ್ಯೋಸಾರ್‌ನ ಪಳೆಯುಳಿಕೆ ಪತ್ತೆ

ಪಿಟಿಐ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಗುಜರಾತ್‌ನಲ್ಲಿ ಪತ್ತೆಯಾಗಿರುವ ಇಕ್ತ್ಯೋಸಾರ್‌ನ ಪಳೆಯುಳಿಕೆ
ಗುಜರಾತ್‌ನಲ್ಲಿ ಪತ್ತೆಯಾಗಿರುವ ಇಕ್ತ್ಯೋಸಾರ್‌ನ ಪಳೆಯುಳಿಕೆ   

ನವದೆಹಲಿ: ಡೈನೊಸಾರ್‌ಗಳ ಕಾಲದಲ್ಲಿ ಬದುಕಿದ್ದ, ಸಮುದ್ರದಲ್ಲಿ ಜೀವಿಸುತ್ತಿದ್ದ ಇಕ್ತ್ಯೋಸಾರ್‌ನ ಬಹುತೇಕ ಪೂರ್ಣವಾದ ಪಳೆಯುಳಿಕೆಯೊಂದನ್ನು ಗುಜರಾತ್‌ನ ಕಛ್‌ ಪ್ರದೇಶದಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇಕ್ತ್ಯೋಸಾರ್‌ ಎಂದರೆ ಗ್ರೀಕ್‌ ಭಾಷೆಯಲ್ಲಿ ‘ಮೀನು ಹಲ್ಲಿ’ ಎಂದರ್ಥ. ದೊಡ್ಡ ಗಾತ್ರದ ಸರೀಸೃಪವಾಗಿದ್ದ ಇವುಗಳು 25 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳ ಜೊತೆಯಲ್ಲೇ ಜೀವಿಸಿದ್ದವು.

ಭುಜ್‌ನಿಂದ ಈಶಾನ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಲೊಡಾಯಿ ಗ್ರಾಮದಲ್ಲಿ ಎರಡು ವರ್ಷಗಳ ಕಾಲ ಉತ್ಖನನ ನಡೆಸಿದ ಬಳಿಕ ವಿಜ್ಞಾನಿಗಳು 5.5 ಮೀ ಉದ್ದದ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಉತ್ಖನನ ಕಾರ್ಯಕ್ಕೆ ಜರ್ಮಿನಿಯ ವಿಜ್ಞಾನಿಗಳೂ ನೆರವಾಗಿದ್ದಾರೆ.

ADVERTISEMENT

ಸಮುದ್ರದಲ್ಲಿ ಬದುಕಿದ್ದ ಜೀವಿಗಳ ಪಳೆಯುಳಿಕೆಗಳು ಈ ಹಿಂದೆ ಹಿಮಾಲಯ, ಪರ್ಯಾಯ ದ್ವೀಪ (ಕಛ್‌, ಜೈಲಸ್ಮೇರ್‌) ಪ್ರದೇಶಗಳಲ್ಲಿ ಪತ್ತೆಯಾಗಿದ್ದರೂ, ಇಕ್ತ್ಯೋಸಾರ್‌ನ ಅವಶೇಷಗಳು ಭಾರತದಲ್ಲಿ ಇದುವರೆಗೆ ಪತ್ತೆಯಾಗಿರಲಿಲ್ಲ.

ಇದಕ್ಕೂ ಮೊದಲು ಬ್ರಿಟನ್‌, ಜರ್ಮನಿ, ಫ್ರಾನ್ಸ್‌, ರಷ್ಯಾ, ನಾರ್ವೆ, ಉತ್ತರ ಮತ್ತು ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ‘ಮೀನು ಹಲ್ಲಿಗಳ’ ಪಳೆಯುಳಿಕೆಗಳು ಪತ್ತೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.