ಅಹಮದಾಬಾದ್ (ಪಿಟಿಐ): ಇಲ್ಲಿ ಗುರುವಾರ ನಡೆಯಲಿರುವ ರಥ ಯಾತ್ರೆ ವೇಳೆ ಸ್ಫೋಟಿಸುವ ಉದ್ದೇಶದಿಂದ ವಾಹನವೊಂದರಲ್ಲಿ ಇಡಲಾಗಿದ್ದ ಐದು ನಾಡ ಬಾಂಬ್‌ಗಳನ್ನು ಗುಜರಾತ್ ಪೊಲೀಸರು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿರುವ ಘಟನೆ ಬುಧವಾರ ನಡೆದಿದೆ. ಗೋಮತಿಪುರ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಟೆಂಪೋದಲ್ಲಿ ನಾಡಬಾಂಬ್‌ಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.