ADVERTISEMENT

`ಗುಜರಾತ್ ಗಲಭೆ ದುರದೃಷ್ಟಕರ'

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): 2002ರಲ್ಲಿ ನಡೆದ ಗುಜರಾತ್ ಗಲಭೆ `ದುರದೃಷ್ಟಕರ'. ಈ ವಿಷಯವಾಗಿ ಏನೇ `ಗೊಂದಲ'ಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳೋಣ ಎಂದು ಮುಸ್ಲಿಂರಲ್ಲಿ ಮನವಿ ಮಾಡಿದ ಹೊರತಾಗಿಯೂ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಹೇಳಿದ್ದಾರೆ.

`ದುರದೃಷ್ಟಕರ ಘಟನೆ ನಡೆದಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೇ ಇದ್ದವರು ಮುಖ್ಯಮಂತ್ರಿಗಳೇ ಈ ಕೋಮುಗಲಭೆಯನ್ನು ಯೋಜಿಸಿದ್ದರು ಎಂದು ಮೋದಿ ಅವರನ್ನು ದೂಷಿಸುತ್ತಿದ್ದಾರೆ' ಎಂದರು.

`ನಾನು ಅವರನ್ನು ಭೇಟಿ ಮಾಡಿದಾಗ ಅವರ ಮುಖಭಾವ ಅರಿತುಕೊಂಡಿದ್ದೆ. ಘಟನೆಯ ಕುರಿತು ಮಾಡುತ್ತಿರುವ ದೋಷಾರೋಪದ ಬಗ್ಗೆ ಮೋದಿ ದುಃಖಿತರಾಗಿದ್ದಾರೆ. ಜನರೊಂದಿಗೆ ಆಗಿರುವ ತಪ್ಪೇನು. ಇದೂ ರಾಜಕೀಯವೇ' ಎಂದು ಅವರು ಪ್ರಶ್ನಿಸಿದರು.

ಇಲ್ಲಿ ನಡೆದ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ಸರ್ಕಾರ ಬ್ರಿಟಿಷರ ಒಡೆದು ಆಳು ನೀತಿ ಅನುಸರಿಸುತ್ತಿದೆ' ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.