ADVERTISEMENT

ಗೂಗಲ್‌: ಕೆಲಸ ಹುಡುಕುವುದು ಇನ್ನಷ್ಟು ಸುಲಭ

ಪಿಟಿಐ
Published 24 ಏಪ್ರಿಲ್ 2018, 19:40 IST
Last Updated 24 ಏಪ್ರಿಲ್ 2018, 19:40 IST
ಗೂಗಲ್‌: ಕೆಲಸ ಹುಡುಕುವುದು ಇನ್ನಷ್ಟು ಸುಲಭ
ಗೂಗಲ್‌: ಕೆಲಸ ಹುಡುಕುವುದು ಇನ್ನಷ್ಟು ಸುಲಭ   

ನವದೆಹಲಿ (ಪಿಟಿಐ): ಭಾರತದಲ್ಲಿರುವ ಬಳಕೆದಾರರು ಗೂಗಲ್‌ ಮುಖಾಂತರ ಕೆಲಸ ಹುಡುಕುವುದು ಈಗ ಇನ್ನಷ್ಟು ಸುಲ
ಲಿತ. ಸಂಸ್ಥೆಯ ವೆಬ್‌ಪುಟದಲ್ಲಿ ಸೂಕ್ತ ಉದ್ಯೋಗದ ಅವಕಾಶಗಳನ್ನು ಹುಡುಕುವುದು ಇನ್ನು ಸುಲಭವಾಗಲಿದೆ.

ಆಸಾನ್‌ಜಾಬ್ಸ್, ಫ್ರೆಷರ್ಸ್ ವರ್ಲ್ಡ್, ಹೆಡ್‌ಹೊನ್‌ಚೋಸ್, ಐಬಿಎಂ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್, ಲಿಂಕ್ಡ್‌ಇನ್, ಕ್ವೆಝ್, ಕ್ವಿಕರ್ ಜಾಬ್ಸ್, ಶೈನ್ ಡಾಟ್‌ಕಾಮ್, ಟಿ–ಜಾಬ್ಸ್, ಟೈಮ್ಸ್ ಜಾಬ್ಸ್ ಮತ್ತು ವಿಸ್ಡಮ್‌ಜಾಬ್ಸ್‌ ಸಂಸ್ಥೆಗಳ ಜೊತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.

‘ಜಾಬ್ಸ್ ನಿಯರ್ ಮಿ’ ಅಥವಾ ‘ಜಾಬ್ಸ್ ಫಾರ್ ಫ್ರೆಷರ್ಸ್’ ಎಂದು ಗೂಗಲ್‌ನಲ್ಲಿ ಹುಡುಕಿದಾಗ, ಉದ್ಯೋಗದ ಪಟ್ಟಿಯೇ ತೆರೆದುಕೊಳ್ಳು
ತ್ತದೆ. ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿದಾಗ, ಆ ಹುದ್ದೆಯ ಹೆಸರು, ಸ್ಥಳ ಮೊದಲಾದ ವಿವರವಾದ ಮಾಹಿತಿ ಲಭ್ಯವಾಗುತ್ತದೆ.  2017ರ ನಾಲ್ಕನೇ ತ್ರೈಮಾಸಿಕದಲ್ಲಿ ಉದ್ಯೋಗಕ್ಕಾಗಿ ಹುಡುಕಾಟವು ಶೇ 45ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.