ADVERTISEMENT

ಗೃಹ ಸಾಲಕ್ಕೆ ಬಡ್ಡಿ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 10:35 IST
Last Updated 28 ಫೆಬ್ರುವರಿ 2011, 10:35 IST

ನವದೆಹಲಿ (ಐಎಎನ್ಎಸ್): ವಸತಿ ಕ್ಷೇತ್ರಕ್ಕೆ ಉತ್ತೇಜನ ಕೊಡುವ ಸಲುವಾಗಿ 15 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಗೃಹ ಸಾಲಗಳ ಮೇಲೆ ವಿಧಿಸಲಾಗುವ ಬಡ್ಡಿದರಲ್ಲಿ  ಶೇ. 1 ರಷ್ಟು ಸಬ್ಸಿಡಿ ನೀಡುವ ಪ್ರಸ್ತಾವವನ್ನು 2011-12ನೇ ಸಾಲಿನ ಮುಂಗಡ ಪತ್ರ ಹೊಂದಿದೆ. ಈ ರಿಯಾತಿಯಿ ಸಿಗಬೇಕಾದರೆ ಒಟ್ಟಾರೆ ಗೃಹ ನಿರ್ಮಾಣದ ವೆಚ್ಚ 25 ಲಕ್ಷಗಳನ್ನು ಮೀರುವಂತಿಲ್ಲ.

ಸದ್ಯ ಗೃಹ ನಿರ್ಮಾಣ ವೆಚ್ಚ 20 ಲಕ್ಷದ ಒಳಗಿರುವ 10 ಲಕ್ಷ ರೂಗಿಂತ ಕಡಿಮೆ ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT