ADVERTISEMENT

ಗೋರಕ್ಷಕರನ್ನು ಎದುರಿಸಲು ಆಯುಧ ಕೈಗೆತ್ತಿಕೊಳ್ಳುತ್ತೇವೆ: ಮುಸ್ಲಿಂ ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 9:55 IST
Last Updated 2 ಜುಲೈ 2017, 9:55 IST
ಗೋರಕ್ಷಕರನ್ನು ಎದುರಿಸಲು ಆಯುಧ ಕೈಗೆತ್ತಿಕೊಳ್ಳುತ್ತೇವೆ: ಮುಸ್ಲಿಂ ಮಹಿಳೆಯರ ಆಕ್ರೋಶ
ಗೋರಕ್ಷಕರನ್ನು ಎದುರಿಸಲು ಆಯುಧ ಕೈಗೆತ್ತಿಕೊಳ್ಳುತ್ತೇವೆ: ಮುಸ್ಲಿಂ ಮಹಿಳೆಯರ ಆಕ್ರೋಶ   

ರಾಮಗಢ: ಜಾರ್ಖಂಡ್‍ನ ರಾಮಗಢದಲ್ಲಿ ಎರಡು ದಿನಗಳ ಹಿಂದೆ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು 100ಕ್ಕೂ ಹೆಚ್ಚು ಜನರ ಗುಂಪು ತೀವ್ರವಾಗಿ ಥಳಿಸಿ ಹತ್ಯೆ ಮಾಡಿತ್ತು.

ಗೋರಕ್ಷಕರ ಈ ಅಟ್ಟಹಾಸವನ್ನು ತಡೆಯಲು ಪೊಲೀಸರು ಮತ್ತು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾವು ನಂಬಿದ್ದೆವು. ಆದರೆ ನಮಗೆ ನಿರಾಸೆಯಾಗಿದೆ. ಇನ್ನು ಮುಂದೆ ಗೋರಕ್ಷಕರನ್ನು ಎದುರಿಸಲು ನಾವೇ ಆಯುಧ ಕೈಗೆತ್ತಿಕೊಳ್ಳುತ್ತೇವೆ ಎಂದು ರಾಮಗಢದ ಮುಸ್ಲಿಂ ಮಹಿಳೆಯರು ಗುಡುಗಿದ್ದಾರೆ.

ಕಳೆದ ಗುರುವಾರ ಅಲಿಮುದ್ದೀನ್ ಅಲಿಯಾಸ್ ಅಸ್ಗರ್ ಅಲಿ ಎಂಬವರು ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಗೋರಕ್ಷಕರು ಹೊಡೆದು ಸಾಯಿಸಿದ್ದರು.

ADVERTISEMENT

[related]

ಹೊಡೆದು ಸಾಯಿಸುವ ಮೂಲಕ ಅವರೇನು ನ್ಯಾಯ ಒದಗಿಸುತ್ತಿದ್ದಾರೆ ಎಂದು ಅಸ್ಗರ್ ಅಲಿ ಅವರ ಪತ್ನಿ ಮರಿಯಂ ಖೌತುಮ್ ಪ್ರಶ್ನಿಸುತ್ತಿದ್ದಾರೆ. ಅದೇ ವೇಳೆ  ಗೋಮಾಂಸ ಸಾಗಣೆ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಇಲ್ಲಿನ ಗ್ರಾಮದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.