ನವದೆಹಲಿ (ಪಿಟಿಐ): ಇಲ್ಲಿಯ ಅಮೆರಿಕನ್ ಸೆಂಟರ್ನಲ್ಲಿ ಪರವಾನಗಿ ಇಲ್ಲದೆಯೇ ಚಿತ್ರ ಪ್ರದರ್ಶಿಸುತ್ತಿ ರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಇದೇ 20ರೊಳಗೆ ಪ್ರದರ್ಶನ ನಿಲ್ಲಿಸಲು ಅಮೆರಿಕದ ರಾಯಭಾರ ಕಚೇರಿಗೆ ಗಡುವು ವಿಧಿಸಿದೆ.
ದೇವಯಾನಿ ಖೋಬ್ರಾಗಡೆ ಬಂಧನದ ಹಿನ್ನೆಲೆಯಲ್ಲಿ ಅಮೆರಿಕದ ಮೇಲೆ ಒತ್ತಡ ಹೇರಲು ಭಾರತದ ಮುಂದುವರಿದ ಕ್ರಮ ಇದಾಗಿದೆ ಎನ್ನಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಆಹ್ವಾನಿತರಿಗಾಗಿ ಅಮೆರಿಕನ್ ಸೆಂಟರ್ನಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಈ ಸಂಬಂಧ ಸರ್ಕಾರ ನೋಟಿಸ್ ನೀಡಿದೆ.
ಅಮೆರಿಕ ಮೂಲದ ಸಂಸ್ಥೆಗಳು ನವದೆಹಲಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಚಟುವಟಿಕೆ ಮೇಲೆ ನಿಯಂತ್ರಣ ಹೇರಲು ಸರ್ಕಾರ ಮುಂದಾಗಿದ್ದು, ಇದೀಗ ಅಮೆರಿಕನ್ ಸೆಂಟರ್ ಮೇಲೆ ಕ್ರಮ ಜರುಗಿಸಲಾಗುತ್ತಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.