ADVERTISEMENT

ಚೀನಾ ಗಡಿಯಲ್ಲಿ ಸಮರಾಭ್ಯಾಸ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಚಿನ್ಯಾಲಿಸೌಡ್ (ಉತ್ತರಾಖಂಡ): ದೇಶದಾದ್ಯಂತ ನಡೆಯುತ್ತಿರುವ ಸಮರಾಭ್ಯಾಸದ ಭಾಗವಾಗಿ ಭಾರತೀಯ ವಾಯುಪಡೆ ಮಂಗಳವಾರ ಇಲ್ಲಿ ದೊಡ್ಡ ಮಟ್ಟದಲ್ಲಿ ಸಮರಾಭ್ಯಾಸ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತ–ಚೀನಾ ಗಡಿಯಿಂದ 230 ಕಿ.ಮೀ ದೂರದಲ್ಲಿರುವ ಈ ಪಟ್ಟಣಕ್ಕೆ ಬೆಳಿಗ್ಗೆ ಬಂದಿಳಿದ ವಾಯುಪಡೆ ಯುದ್ಧ ವಿಮಾನಗಳು, ‘ಗಗನ ಶಕ್ತಿ’ ಹೆಸರಿನ ಸಮರಾಭ್ಯಾಸ ನಡೆಸಿವೆ. ಬೆಳಿಗ್ಗೆ 7.15, 7.45 ಮತ್ತು 8.01ಕ್ಕೆ ಮೂರು ಬಾರಿ ಯುದ್ಧ ವಿಮಾನಗಳನ್ನು ಇಳಿಸಲಾಗಿದೆ.

ಇದೇ ತಿಂಗಳು 8ರಂದು ಆರಂಭವಾಗಿದ್ದ ಸಮರಾಭ್ಯಾಸ, ಇದೇ 22ರವರೆಗೆ ನಡೆಯಲಿದೆ. ‘ಗಗನ ಶಕ್ತಿ’ಯು ದಶಕಗಳಲ್ಲೇ ವಾಯುಪಡೆ ನಡೆಸುತ್ತಿರುವ ಅತಿ ದೊಡ್ಡ ಸಮರಾಭ್ಯಾಸ ಎನ್ನಲಾಗಿದೆ.

ADVERTISEMENT

ಚೀನಾ ಮತ್ತು ಪಾಕಿಸ್ತಾನದಿಂದ ದೇಶದ ಭದ್ರತೆಗೆ ಉಂಟಾಗಬಹುದಾದ ಅಪಾಯ ಎದುರಿಸಲು ಸಮರ್ಥವಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಈ ಸಮರಾಭ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.