ADVERTISEMENT

ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, ಸೇನಾಬಲ ವರ್ಧನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 10:00 IST
Last Updated 1 ಫೆಬ್ರುವರಿ 2012, 10:00 IST

ವಾಷಿಂಗ್ಟನ್ (ಪಿಟಿಐ): ತನ್ನ ಗಡಿಯಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳಿಂದ ಕಳವಳಗೊಂಡಿರುವ ಭಾರತವು ಚೀನಾ ಜೊತೆಗೆ ~ಸೀಮಿತ ಘರ್ಷಣೆ~ಗೆ ತನ್ನ ಸೇನೆಯನ್ನು ಬಲಪಡಿಸುತ್ತಿದೆ ಎಂದು ಅಮೆರಿಕದ ಉನ್ನತ ಜಾಗೃತಾ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ನಡುವಣ ಪ್ರಕ್ಷುಬ್ದತೆಯ ವಿಚಾರವನ್ನು ನಗಣ್ಯಗೊಳಿಸಲು ಬಹಿರಂಗ ಹೇಳಿಕೆಗಳು ಯತ್ನಿಸುತ್ತಿದ್ದರೂ ತನ್ನ ವಿವಾದಿತ ಗಡಿಯುದ್ದಕ್ಕೂ ಚೀನಾ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ಚಿಂತೆ ಇದೆ. ಹಿಂದೂ ಮಹಾಸಾಗರ ಮತ್ತು ಶಾಂತಸಾಗರ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರೀ ನಡವಳಿಕೆಗಳು ಇದಕ್ಕೆ ಇನ್ನಷ್ಟು ಉಪ್ಪು ಸುರಿದಿವೆ ಎಂದು ಅಮೆರಿಕದ ನ್ಯಾಷನಲ್ ಇಂಟೆಲಿಜೆನ್ಸ್ ನ ನಿರ್ದೇಶಕ ಜೇಮ್ಸ್ ಕ್ಲಾಪ್ಪರ್ ಜಾಗೃತಾ ದಳದ ಸೆನೆಟ್ ಆಯ್ಕೆ ಸಮಿತಿ ಮುಂದೆ ನೀಡಿದ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

~ಭಾರತ ಮತ್ತು ಚೀನಾ ಮಧ್ಯೆ ಭಾರಿ ಘರ್ಷಣೆಯೇನೂ ಖಚಿತವಲ್ಲ ಎಂಬುದಾಗಿ ಭಾರತೀಯ ಸೇನೆ ನಂಬಿದೆ. ಆದರೆ ಸೀಮಿತ ಘರ್ಷಣೆ ಎದುರಿಸಲು ಭಾರತವು ವಿವಾದಿತ ಗಡಿಯುದ್ದಕ್ಕೂ ತನ್ನ ಸೇನೆಯನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಪೂರ್ವ ಏಷ್ಯಾದಲ್ಲಿ ಪ್ರಬಲ ಅಮೆರಿಕನ್ ಸೇನಾ ನೆಲೆಗೆ ಭಾರತ ಬೆಂಬಲ ವ್ಯಕ್ತ ಪಡಿಸಿದೆ ಎಂದೂ ಕ್ಲಾಪ್ಪರ್ ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.