ನವದೆಹಲಿ (ಪಿಟಿಐ): ಚೀನಾ ದೇಶದೊಂದಿಗಿನ ಗಡಿ ಮಾತುಕತೆಗೆ ಎನ್ಡಿಎ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್ ಅವರನ್ನು ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದೆ.
ಈ ಹೊಣೆಗಾರಿಕೆಯು ಧೋಬಾಲ್ ಅವರ ಕಾರ್ಯವ್ಯಾಪ್ತಿಯಲ್ಲೇ ಬರುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಚೀನಾ ಜತೆಗಿನ ಗಡಿ ಮಾತುಕತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲಾಗುತ್ತದೆ.
ದೋಭಾಲ್ ಅವರು ಮೇ ತಿಂಗಳಿನಲ್ಲಿಯೇ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದರೂ ಈವರೆಗೆ ಅವರನ್ನು ವಿಶೇಷ ಪ್ರತಿನಿಧಿಯನ್ನಾಗಿ ನೇಮಕ ಮಾಡಿರಲಿಲ್ಲ. ಚೀನಾ, ಉಪಸಚಿವರ ಮಟ್ಟದ ಅಧಿಕಾರಿಯನ್ನು ಈ ಮಾತುಕತೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿದೆ. ಈವರೆಗೆ ೧೭ ಬಾರಿ ಗಡಿ ಮಾತುಕತೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.