ನವದೆಹಲಿ (ಪಿಟಿಐ): `ಹೆಲಿಕಾಪ್ಟರ್ ಹಾಗೂ ರೈಲು~ಗಳ ಮೇಲೆ ವೆಚ್ಚ ಮಾಡಿದ ಹಣ ಹಾಗೂ ತನ್ನ ಚುನಾವಣಾ ನಿಧಿಗೆ ಸಂಬಂಧಿಸಿದಂತೆ ಸರಿಯಾದ ಲೆಕ್ಕ ನೀಡುವಂತೆ ಕಾಂಗ್ರೆಸ್‌ಗೆ ಅಣ್ಣಾ ಹಜಾರೆ ಹಾಗೂ ಅವರ ನಿಕಟವರ್ತಿ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ವೆಬ್‌ಸೈಟ್‌ಗೆ ಸಂಬಂಧಸಿದ ವೆಚ್ಚವನ್ನು ಬಹಿರಂಗಗೊಳಿಸಬೇಕು ಎಂದೂ ಪಕ್ಷವನ್ನು ಆಗ್ರಹಿಸಿರುವ ಕೇಜ್ರಿವಾಲ್, ಸಾರ್ವಜನಿಕರಿಂದ ಅಣ್ಣಾ ತಂಡ ಸಂಗ್ರಹಿಸಿದ ಹಣ ಹಾಗೂ ಲೋಕಪಾಲ್ ಪ್ರತಿಭಟನೆಗಳಿಗೆ ಮಾಡಿದ ವೆಚ್ಚವನ್ನು ಬಹಿರಂಗಪಡಿಸುವಂತೆ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪದೇ ಪದೇ ಹೇಳಿದ್ದರು. ಇದೀಗ ಕಾಂಗ್ರೆಸ್ ಪಕ್ಷವು ತನ್ನ ಖರ್ಚಿಗೆ ಸಂಬಂಧಿಸಿದಂತೆ ಸರಿಯಾದ ಲೆಕ್ಕ ನೀಡಲಿ ಎಂದು ಹೇಳಿದರು.
`ನಮ್ಮ ವೆಬ್‌ಸೈಟ್‌ಗೆ ಸಂಬಂಧಿಸಿದಂತೆ ದಾನಿಗಳು, ಖರ್ಚು ವೆಚ್ಚ ಇತ್ಯಾದಿಯಾಗಿ ಎಲ್ಲ ವಿವರಗಳನ್ನು ನಾವು ನೀಡುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಹೆಲಿಕಾಪ್ಟರ್‌ಗಳು ಹಾಗೂ ರೈಲುಗಳ ಮೇಲೆ ಎಷ್ಟು ವೆಚ್ಚ ಮಾಡಿದ್ದಾರೆ ಎಂಬುದನ್ನು ನಾವು ದಿಗ್ವಿಜಯ ಸಿಂಗ್ ಅವರಿಂದ ತಿಳಿಯಬೇಕಾಗಿದೆ~ ಎಂದು ಅವರು ಹೇಳಿದರು.ಅವರು ತಮ್ಮ ಖರ್ಚು ವೆಚ್ಚವನ್ನು ಬಹಿರಂಗಗೊಳಿಸಬೇಕು ಹಾಗೂ ಅದನ್ನು ಅವರ ವೆಬ್‌ಸೈಟ್‌ನಲ್ಲಿ ಹಾಕಬೇಕು~ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.