ADVERTISEMENT

ಚುನಾವಣೆ: ಎಎಪಿ 3ನೇ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 13:06 IST
Last Updated 1 ಮಾರ್ಚ್ 2014, 13:06 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಸ್ಪರ್ದಿಸಲಿರುವ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ (ಎಎಪಿ) ಶನಿವಾರ ಬಿಡುಗಡೆ ಮಾಡಿತು.

ಹಾಸ್ಯ ಕಲಾವಿದ ಜಸ್ಪಾಲ್ ಬಟ್ಟಿ ಅವರ ಪತ್ನಿ ಸವಿತಾ ಬಟ್ಟಿ ಅವರು ಚಂಡೀಗಡ ಕ್ಷೇತ್ರದಿಂದ, ಜೆಎನ್‌ಯುನ ಪ್ರೊ.ಆನಂದ್‌ಕುಮಾರ್ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಪಕ್ಷದ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. 

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ, ದೆಹಲಿ, ಕೇರಳದಲ್ಲಿ ತಲಾ ಎರಡು ಕ್ಷೇತ್ರ, ಮಧ್ಯಪ್ರದೇಶ ಏಳು ಕ್ಷೇತ್ರ, ಒಡಿಶಾ ಮತ್ತು ಬಿಹಾರ ರಾಜ್ಯಗಳಲ್ಲಿ ತಲಾ ಏಳು ಕ್ಷೇತ್ರಗಳಲ್ಲಿ ಪಕ್ಷದಿಂದ ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಎಎಪಿ ಪ್ರಕಟಿಸಿದೆ.

ನಟರು, ವೈದ್ಯರು, ಶಿಕ್ಷಕರು, ಮಾಜಿ ರಾಯಭಾರಿ, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.