ADVERTISEMENT

ಜಗನ್ ಪ್ರಕರಣ: ಇನ್ನಷ್ಟು ಇಕ್ಕಟ್ಟಿನಲ್ಲಿ ಆಂಧ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಹೈದರಾಬಾದ್(ಐಎಎನ್‌ಎಸ್): ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ಜಗನ್‌ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವು ಆಂಧ್ರದ ಕಾಂಗ್ರೆಸ್  ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕೋರ್ಟ್‌ಗೆ ಸಲ್ಲಿಸಿದ 5ನೇ ಆರೋಪ ಪಟ್ಟಿಯಲ್ಲಿ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ  ಹೆಸರು ಇದೆ. ಇವರ ವಿರುದ್ಧ ವಂಚನೆ, ಅಪರಾಧ ಪಿತೂರಿ ಹಾಗೂ ಪ್ರಭಾವ ಬಳಸಿ ದಾಲ್ಮಿಯಾ ಸಿಮೆಂಟ್ ಕಂಪೆನಿಗೆ ಸುಣ್ಣದಕಲ್ಲು ಗಣಿ ಹಂಚಿಕೆ ಮಾಡಿದ ಆರೋಪ ಹೊರಿಸಲಾಗಿದೆ. ಸಿ.ಎಂ. ಕಿರಣ್ ಕುಮಾರ್ ರೆಡ್ಡಿ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ 3ನೇ ಮಂತ್ರಿ ಸಬಿತಾ ಇಂದ್ರಾ ರೆಡ್ಡಿ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.