ADVERTISEMENT

ಜಾಮೀನು ರದ್ದು ಪೊಲೀಸರ ಯತ್ನ ಕನ್ವಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ರಾಮಪುರ (ಪಿಟಿಐ):  ದುರ್ಗಾಶಕ್ತಿ ನಾಗ್‌ಪಾಲ್ ಅಮಾನತು ವಿರೋಧಿಸಿ ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿದ್ದ ಉತ್ತರ ಪ್ರದೇಶದ ದಲಿತ ಚಿಂತಕ ಕನ್ವಲ್ ಭಾರ್ತಿ,  ತಮ್ಮ ಜಾಮೀನು ರದ್ದುಪಡಿಸಲು  ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  ರಾಜ್ಯದ ಸಚಿವರೊಬ್ಬರ ಆಣತಿಯಂತೆ ಪೊಲೀಸರು ಜಾಮೀನು ರದ್ದುಗೊಳಿಸಲು ರಾಮಪುರದ ನ್ಯಾಯಾಲಯಕ್ಕೆ ಹೋಗಿದ್ದಾರೆ. ತನ್ನನ್ನು ಭಯೋತ್ಪಾದಕರಂತೆ ನಡೆಸಿಕೊಂಡಿದ್ದಾರೆ ಎಂದು ಕನ್ವಲ್ ಭಾರ್ತಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸೆ. 16 ರಂದು `ನನ್ನ ಪ್ರತಿಕ್ರಿಯೆಯನ್ನು ಸಿಜೆಎಂ ನ್ಯಾಯಾಧೀಶರಿಗೆ ಸಲ್ಲಿಸುತ್ತಿದ್ದೇನೆ. ನನ್ನ ಜಾಮೀನು ಅರ್ಜಿಯನ್ನು ರದ್ದುಗೊಳಿಸಲು ಪೊಲೀಸರು ಯಾವ ಆಧಾರವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ನೋಡುತ್ತೇನೆ' ಎಂದು ಕನ್ವಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.