ADVERTISEMENT

ಜಾರ್ಖಂಡ್‌: ಪಡಿತರ ರದ್ದಾಗಿ ಹಸಿವಿನಿಂದ ಮೃತಪಟ್ಟ ಬಾಲಕಿಯ ತಾಯಿಗೆ ಗ್ರಾಮ ತೊರೆಯುವಂತೆ ನಿಂದನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:04 IST
Last Updated 22 ಅಕ್ಟೋಬರ್ 2017, 7:04 IST
ಜಾರ್ಖಂಡ್‌: ಪಡಿತರ ರದ್ದಾಗಿ ಹಸಿವಿನಿಂದ ಮೃತಪಟ್ಟ ಬಾಲಕಿಯ ತಾಯಿಗೆ ಗ್ರಾಮ ತೊರೆಯುವಂತೆ ನಿಂದನೆ
ಜಾರ್ಖಂಡ್‌: ಪಡಿತರ ರದ್ದಾಗಿ ಹಸಿವಿನಿಂದ ಮೃತಪಟ್ಟ ಬಾಲಕಿಯ ತಾಯಿಗೆ ಗ್ರಾಮ ತೊರೆಯುವಂತೆ ನಿಂದನೆ   

ರಾಂಚಿ: ಪಡಿತರ ಸಿಗದೆ ಹಸಿವಿನಿಂದ ಮಗುವನ್ನು ಕಳೆದುಕೊಂಡಿರುವ ತಾಯಿಗೆ ಗ್ರಾಮಸ್ಥರು ನಿಂದಿಸಿ, ಗ್ರಾಮ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ.

ಆಧಾರ್ ಕಾರ್ಡ್ ಲಿಂಕ್ ಮಾಡದ ಬಡ ಕುಟುಂಬವೊಂದಕ್ಕೆ ಕಳೆದ ಕೆಲವು ತಿಂಗಳುಗಳಿಂದ ಪಡಿತರ ನೀಡದ ಪರಿಣಾಮ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಎಂಬಾಕೆ ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ನಡೆದ ಜಾರ್ಖಂಡ್‌ನ ಸಿಮ್‌ಡೇಗಾ ಜಿಲ್ಲೆಯ ಗ್ರಾಮದಲ್ಲಿ ಸಂತೋಷಿ ಕುಮಾರಿ ತಾಯಿಗೆ ನಿಂದಿಸಿ, ಗ್ರಾಮ ತೊರೆಯುವಂತೆ ಬೆದರಿಕೆ ಹಾಕಿದ್ದು, ಆ ಮಹಿಳೆಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

‘ನಾನು ಭಯದಿಂದ ಜೀವಿಸುತ್ತಿದ್ದೇನೆ. ಗ್ರಾಮಸ್ಥರು ನನ್ನನ್ನು ನಿಂದಿಸಿ, ಗ್ರಾಮ ಬಿಡಲು ಹೇಳಿದರು’ ಎಂದು ಹಸಿವಿನಿಂದ ಮೃತಪಟ್ಟ ಸಂತೋಷಿ ಕುಮಾರಿಯ ತಾಯಿ ಕೊಯ್ಲಿ ದೇವಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.