ಜೆಮ್ಷೆಡ್‌ಪುರ/ಮೆದಿನಿನಗರ (ಪಿಟಿಐ): ಜಾರ್ಖಂಡ್‌ನ ಸೆರೈಕೆಲಾ-ಖರ‌್ಸವಾನ್ ಜಿಲ್ಲೆಯ ಪಲ್ನಾ ಜಲಾಶಯ ಸಮೀಪದ ರಸ್ತೆಯ ಎರಡು ಬದಿಯಲ್ಲಿ ಹುದುಗಿಸಿಟ್ಟಿದ್ದ 130 ನೆಲಬಾಂಬ್‌ಗಳನ್ನು ಭದ್ರತಾ ಪಡೆಗಳು ಶನಿವಾರ ವಶಪಡಿಸಿಕೊಂಡಿವೆ.
ಜಾರ್ಖಂಡ್-ಛತ್ತೀಸ್‌ಗಡ ಗಡಿಯಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿವೆ. ಸಿಆರ್‌ಪಿಎಫ್ ಯೋಧರಿಗೆ ಸ್ಥಳೀಯ ಪೊಲೀಸರು ಕಾರ್ಯಾಚರಣೆಯಲ್ಲಿ ನೆರವು ನೀಡುತ್ತಿದ್ದಾರೆ. `ರಾತ್ರಿ ವೇಳೆಯು ಕಾರ್ಯಾಚರಣೆ ಮುಂದುವರಿಯಲಿದೆ. ಪಲಮಾವ್ ಮತ್ತು ಗರ್ವ್ಹಾ ಜಿಲ್ಲೆಯಿಂದ ಜಾರ್ಖಂಡ್‌ನೊಳಗೆ ನಕ್ಸಲರು ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ~ ಎಂದು ಸಿಆರ್‌ಪಿಎಫ್‌ನ ಕಮಾಂಡರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.