ADVERTISEMENT

ಜಿಎಸ್‌ಟಿ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:50 IST
Last Updated 1 ಜುಲೈ 2017, 19:50 IST
ಜಿಎಸ್‌ಟಿ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌
ಜಿಎಸ್‌ಟಿ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌   

ನವದೆಹಲಿ: ‘ರಿಯಲ್‌ ಎಸ್ಟೇಟ್‌ ವಹಿವಾಟನ್ನು ಶೀಘ್ರದಲ್ಲೇ ಜಿಎಸ್‌ಟಿ ವ್ಯಾಪ್ತಿಗೆ ತರಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆ ನೀಡಿದ್ದಾರೆ.

ಇದರಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಪ್ಪುಹಣದ ಚಲಾವಣೆ ಮತ್ತು ಅಕ್ರಮ ಸಂಪತ್ತಿಗೆ ಕಡಿವಾಣ ಬೀಳಲಿದೆ ಎಂದು  ತಜ್ಞರು ಅಭಿಪ್ರಾ ಯಪಟ್ಟಿದ್ದಾರೆ.

‘ರಿಯಲ್‌ ಎಸ್ಟೇಟ್‌ ವಹಿವಾಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ವೈಯಕ್ತಿಕವಾಗಿ ನನ್ನ ಒಪ್ಪಿಗೆ ಇದೆ. ಇದಕ್ಕೆ ದೆಹಲಿ ಸರ್ಕಾರ ಬೆಂಬಲ ಸೂಚಿಸಿದೆ. ಆದರೆ, ಕೆಲವು ರಾಜ್ಯಗಳು ವಿರೋಧಿಸುತ್ತಿವೆ. ಮುಂಬರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಜೇಟ್ಲಿ ತಿಳಿಸಿದ್ದಾರೆ.

ADVERTISEMENT

ಈ ವಲಯವನ್ನು ಹೊಸ ತೆರಿಗೆ ವ್ಯಾಪ್ತಿಗೆ ತರುವುದರಿಂದ ಭೂಮಿ ಮತ್ತು ಆಸ್ತಿಗಳ ಮಾಲೀಕತ್ವ ಹಾಗೂ ನಿಯಂತ್ರಣದಲ್ಲಿ ಪಾರದರ್ಶಕತೆ ಮೂಡಲಿದೆ ಎಂದು ದೆಹಲಿ  ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರು ಮಾರ್ಚ್‌ನಲ್ಲಿ ಜೇಟ್ಲಿಗೆ ಪತ್ರ ಬರೆದು ಸಲಹೆ ನೀಡಿದ್ದರು.

ತೆರಿಗೆ ಹಂತದಲ್ಲಿ ಬದಲಾವಣೆ?: ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾದಲ್ಲಿ ಕೆಲವು ತೆರಿಗೆ ಹಂತಗಳನ್ನು ವಿಲೀನಗೊಳಿಸುವ ಸಾಧ್ಯತೆಯ ಬಗ್ಗೆ ಜೇಟ್ಲಿ ಸುಳಿವು ನೀಡಿದ್ದಾರೆ.

ಶೇ 12 ಮತ್ತು ಶೇ 18ರಷ್ಟಿರುವ ತೆರಿಗೆ ಹಂತಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ಗರಿಷ್ಠ ಮಟ್ಟದ (ಶೇ 28) ತೆರಿಗೆ ಹಂತವನ್ನು ಶೇ18ರ ಹಂತದಲ್ಲಿ ವಿಲೀನಗೊಳಿಸುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ.

* ರಿಯಲ್‌ ಎಸ್ಟೇಟ್‌ ವಹಿವಾಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ವೈಯಕ್ತಿಕವಾಗಿ ನನ್ನ ಒಪ್ಪಿಗೆ ಇದೆ.

–ಅರುಣ್‌ ಜೇಟ್ಲಿ, ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.