ADVERTISEMENT

ಜೀವದಾನ ತೀರ್ಪು ಪರಾಮರ್ಶೆಗೆ ಕೇಂದ್ರ ಮನವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 11:01 IST
Last Updated 1 ಮಾರ್ಚ್ 2014, 11:01 IST
ಜೀವದಾನ ತೀರ್ಪು ಪರಾಮರ್ಶೆಗೆ ಕೇಂದ್ರ ಮನವಿ
ಜೀವದಾನ ತೀರ್ಪು ಪರಾಮರ್ಶೆಗೆ ಕೇಂದ್ರ ಮನವಿ   

ನವದೆಹಲಿ (ಪಿಟಿಐ) : ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ತೀರ್ಪನ್ನು ಪರಾಮರ್ಶಿಸುವಂತೆ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಶನಿವಾರ ಮನವಿ ಸಲ್ಲಿಸಿದೆ.

ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳೂ ಸೇರಿದಂತೆ 15 ಮಂದಿಗೆ ಜೀವದಾನ ನೀಡಿದ ಜನವರಿ 21ರ ತೀರ್ಪು ದೋಷದಿಂದ ಕೂಡಿದ್ದು ನ್ಯಾಯಸಮ್ಮತವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಅಲ್ಲದೆ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತಹ ಮಹತ್ವದ ವಿಷಯಗಳನ್ನು ಸಂವಿಧಾನ ಪೀಠ ವಿಚಾರಣೆ ನಡೆಸಬೇಕು ಮತ್ತು ತ್ರಿಸದಸ್ಯ ಪೀಠ ತೀರ್ಪನ್ನು ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.