ADVERTISEMENT

ಜೀವ ಭಯ: ಸೋನಿಯಾಗೆ ಸರಬ್ಜಿತ್ ಸಿಂಗ್ ಪತ್ರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಅಮೃತಸರ್ (ಪಿಟಿಐ):  ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಪಾಕಿಸ್ತಾನದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭಾರತದ ಸರಬ್ಜಿತ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

`ಜೈಲಿನಲ್ಲಿ ನನ್ನನ್ನು ತೀರ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದು ತಿನ್ನಲು ಆಗದ ಅಪೌಷ್ಟಿಕ ಆಹಾರ ನೀಡಲಾಗುತ್ತಿದೆ~ ಎಂದು ಸಿಂಗ್ ತಿಳಿಸಿದ್ದಾರೆ. ಸರಬ್ಜಿತ್‌ಗೆ ಕ್ಷಮಾದಾನ ನೀಡಲು ಕೋರಿ ಅಲ್ಲಿನ ಅಧ್ಯಕ್ಷರಿಗೆ ಮತ್ತೊಂದು ಮನವಿ ಸಲ್ಲಿಸಲಾಗಿದೆ  ಎಂದು ಸಿಂಗ್ ಪರ ವಕೀಲ ಶೇಖ್ ತಿಳಿಸಿದ್ದು ಸೋನಿಯಾಗೆ ಬರೆದ ಪತ್ರವನ್ನು ಅವರು ಭಾರತಕ್ಕೆ ತಂದಿದ್ದಾರೆ.

ಸೋನಿಯಾ ಅಲ್ಲದೇ ಸಹೋದರಿ ದಲಬೀರ್ ಕೌರ್ ಹಾಗೂ ಮಗಳು ಪೂನಂಗೆ ಸರಬ್ಜಿತ್ ಪ್ರತ್ಯೇಕ ಪತ್ರಗಳನ್ನು ಕಳುಹಿಸಿದ್ದಾರೆ. ಜೈಲಿನಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯವೂ ಇಲ್ಲ. ದಿನೇದಿನೇ ಆರೋಗ್ಯ ಹದಗೆಡುತ್ತಿದೆ ಎಂದು ಸಿಂಗ್ ಈ ಪತ್ರಗಳಲ್ಲಿ ತಿಳಿಸಿದ್ದಾರೆ.

1990ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ 14 ಜನರನ್ನು ಬಲಿ ತೆಗೆದುಕೊಂಡ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಸರಬ್ಜಿತ್‌ಗೆ ಅಲ್ಲಿಯ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.