ADVERTISEMENT

ಜೂನ್ 30 ಮಧ್ಯರಾತ್ರಿ ಜನಿಸಿದ ಮಗುವಿಗೆ 'ಜಿಎಸ್‍ಟಿ' ಎಂದು ನಾಮಕರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 10:51 IST
Last Updated 3 ಜುಲೈ 2017, 10:51 IST
ಕೃಪೆ: ಪಿಟಿಐ
ಕೃಪೆ: ಪಿಟಿಐ   

ರಾಜಸ್ಥಾನ: ದೇಶದಾದ್ಯಂತ ಜುಲೈ1 ರಂದು ಜಿಎಸ್‍ಟಿ ಜಾರಿಗೆ ಬಂದ ನಂತರ ಎಲ್ಲೆಡೆ ಜಿಎಸ್‍ಟಿಯದ್ದೇ ಸುದ್ದಿ. ಸರಕು ಮತ್ತು ಸೇವಾ ತೆರಿಗೆಯ  ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ, ರಾಜಸ್ಥಾನದಲ್ಲಿನ 'ಜಿಎಸ್‍ಟಿ' ಮಗು ಗಮನ ಸೆಳೆಯುತ್ತಿದೆ.

ಜೂನ್ 30ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಎಸ್‍ಟಿ) ವ್ಯವಸ್ಥೆ ಬಗ್ಗೆ ಭಾಷಣ ಮಾಡುತ್ತಿದ್ದರೆ, ರಾಜಸ್ಥಾನದ ಬೇವಾ ಎಂಬಲ್ಲಿ ಹುಟ್ಟಿದ ಗಂಡು ಮಗುವಿಗೆ 'ಜಿಎಸ್‍ಟಿ' ಎಂದು ನಾಮಕರಣ ಮಾಡಲಾಗಿದೆ.

ಜೂನ್ 30 ಮಧ್ಯರಾತ್ರಿ 12.02ಕ್ಕೆ ಮಗು ಹುಟ್ಟಿದ್ದರಿಂದ ಆ ಮಗುವಿಗೆ ಜಿಎಸ್‍ಟಿ ಎಂಬ ಹೆಸರೇ ಸೂಕ್ತ ಎಂದು ಆ ಕುಟುಂಬದವರು ತೀರ್ಮಾನಿಸಿದ್ದಾರೆ.

ADVERTISEMENT

ಮಗುವಿಗೆ ಜಿಎಸ್‌ಟಿ ಎಂದು ಹೆಸರಿಟ್ಟ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ನಾಯಕರು ಆ ಕಂದಮ್ಮನಿಗೆ ಶುಭಾಶಯಗಳನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.