ADVERTISEMENT

ಜೇಟ್ಲಿ ಕ್ಷಮೆ ಕೇಳಿದ ವಿಶ್ವಾಸ್‌

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST

ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಭಿನ್ನಮತೀಯ ನಾಯಕ ಕುಮಾರ್ ವಿಶ್ವಾಸ್ ಅವರು ಸೋಮವಾರ ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರ ಕ್ಷಮೆ ಕೇಳಿದ್ದು, ಮತ್ತೊಮ್ಮೆ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಹೇಡಿ ಮತ್ತು ಸುಳ್ಳುಗಾರ ಎಂದು ಟೀಕಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕನ ವಿರುದ್ಧದ ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಂಡಿರುವುದಾಗಿ ಭಿನ್ನಮತೀಯ ನಾಯಕ ಪತ್ರ ಸಲ್ಲಿಸಿದ ನಂತರ ನ್ಯಾಯಮುರ್ತಿ ರಾಜೀವ್‌ ಸಹಾ ಎಂಡ್ಲಾ ಅವರು, ವಿಶ್ವಾಸ್ ನೀಡಿದ ಕ್ಷಮಾಪಣೆಯನ್ನು ದಿಲ್ಲಿ ಹೈಕೋರ್ಟ್ ಒಪ್ಪಿಕೊಂಡಿದೆ ಎಂದಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ಕ್ಷಮಾಪಣೆ ಒಪ್ಪಿಕೊಳ್ಳಲಾಗಿದ್ದು, ಅರುಣ್‌ ಜೇಟ್ಲಿ ಪರವಾಗಿ ಹಾಗೂ ಕುಮಾರ್‌ ವಿಶ್ವಾಸ್‌ ವಿರುದ್ಧವಾಗಿ ಪತ್ರ ನೀಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ADVERTISEMENT

‘ಕೇಜ್ರಿವಾಲ್ ಅವರ ಸಮರ್ಥನೆಗಳ ಆಧಾರದ ಮೇರೆಗೆ ಈ ಆರೋಪಗಳನ್ನು ಇತರ ಮುಖಂಡರು ಮಾಡಿದ್ದಾರೆ ಎಂದು ಜೇಟ್ಲಿಗೆ ಬರೆದ ಕ್ಷಮಾಪಣಾ ಪತ್ರದಲ್ಲಿ ಎಎಪಿ ನಾಯಕ ಹೇಳಿದ್ದಾರೆ.

ಡಿಡಿಸಿಎನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಮುಖಂಡರ ವಿರುದ್ಧ ಅರುಣ್ ಜೇಟ್ಲಿ ಅವರು ₹10 ಕೋಟಿ ರುಪಾಯಿಗಳ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.