ನವದೆಹಲಿ, ಮುಂಬೈ: ಟರ್ಕಿಯ ಇಸ್ತಾಂಬುಲ್‌ನ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೃತ ಪಟ್ಟ 39 ಜನರ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ.
ಮೃತಪಟ್ಟವರನ್ನು ಬಾಲಿವುಡ್ ನಿರ್ಮಾಪಕ ಅಬಿಸ್ ರಿಜ್ವಿ ಮತ್ತು ಗುಜರಾತ್‌ನ ಖುಷಿ ಷಾ ಎಂದು ಗುರುತಿಸಲಾಗಿದೆ.
ಅಬಿಸ್ ರಿಜ್ವಿ ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಎ.ಎಚ್. ರಿಜ್ವಿ ಮಗ. ರಿಜ್ವಿ ಸಮೂಹ ಸಂಸ್ಥೆಗಳ ನಿರ್ದೇಶಕ ಮತ್ತು ಸಿಇಒ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.