ADVERTISEMENT

ಟೆಕಿ ಶ್ರೀನಿವಾಸ ಕೂಚಿಭೊಟ್ಲ ಹತ್ಯೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

ಏಜೆನ್ಸೀಸ್
Published 5 ಮೇ 2018, 4:41 IST
Last Updated 5 ಮೇ 2018, 4:41 IST
ಆ್ಯಡಂ ಪ್ಯೂರಿಂಟನ್‌
ಆ್ಯಡಂ ಪ್ಯೂರಿಂಟನ್‌   

ವಾಷಿಂಗ್ಟನ್: ಕಳೆದ ವರ್ಷ ಭಾರತದ ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರನ್ನು ಅಮೆರಿಕದ ಕನ್ಸಾಸ್‌ನಲ್ಲಿ ಗುಂಡಿಟ್ಟು ಹತ್ಯೆಗೈದಿದ್ದ ಆರೋಪಿ ಆ್ಯಡಂ ಪ್ಯೂರಿಂಟನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪುರಿಂಟನ್‌ ಶ್ರೀನಿವಾಸ ಕೂಚಿಭೊಟ್ಲ ಅವರನ್ನು ಹತ್ಯೆಗೈದಿರುವ ಬಗ್ಗೆ ಕನ್ಸಾಸ್‌ ಕೋರ್ಟ್‌ನಲ್ಲಿ ಸ್ವಯಂ ಆಗಿ ಮಾರ್ಚ್‌ನಲ್ಲಿ ತಪ್ಪೊಪ್ಪಿಕೊಂಡಿದ್ದ.

ಏನಿದು ಪ್ರಕರಣ?
ಹೈದರಾಬಾದ್‌ನ ಎಂಜಿನಿಯರ್‌ ಶ್ರೀನಿವಾಸ ಕೂಚಿಭೊಟ್ಲ ಅವರು ತಮ್ಮ ಸ್ನೇಹಿತ ಅಲೋಕ್ ಮದಸಾನಿ ಅವರ ಜತೆಯಲ್ಲಿದ್ದಾಗ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಕೂಗುತ್ತಾ ಕನ್ಸಾಸ್‌ನಲ್ಲಿ ಪುರಿಂಟನ್ ಗುಂಡು ಹಾರಿಸಿದ್ದನು. ಇದರಲ್ಲಿ ಕೂಚಿಭೋಟ್ಲ ಸಾವಿಗೀಡಾಗಿದ್ದರು. ಮದಸಾನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹತ್ಯೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿತ್ತು.

ADVERTISEMENT

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.