ADVERTISEMENT

ಟ್ರಾಯ್ ಅಭಿಪ್ರಾಯ ಕೇಳಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ನವದೆಹಲಿ (ಪಿಟಿಐ): ಗ್ರಾಹಕರಿಗೆ ಮೊಬೈಲ್ ದೂರವಾಣಿ ಸಂಪರ್ಕ ಕಲ್ಪಿಸುವ ಮುನ್ನ ದೂರಸಂಪರ್ಕ ಸೇವೆ ಒದಗಿಸುವ ಟೆಲಿಕಾಂ ಕಂಪೆನಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ರೂಪಿಸಿರುವ ನಿಯಮಾವಳಿ ಕುರಿತು ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಸೂಚಿಸಿದೆ.

ಮೊಬೈಲ್ ದೂರವಾಣಿ ಸಂಪರ್ಕ ಪಡೆಯಲು ಗ್ರಾಹಕರು ನೀಡಿದ ಮಾಹಿತಿ ಮತ್ತು ದಾಖಲೆಗಳನ್ನು ಟೆಲಿಕಾಂ ಕಂಪೆನಿಗಳು ಪರಿಶೀಲಿಸಲು ಸರ್ಕಾರ ಈಗ ರೂಪಿಸಿರುವ ನಿಯಮಾವಳಿ ಸಾಕಾಗಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಕೇಳಿದ್ದಾರೆ. ಎರಡು ವಾರಗಳ ನಂತರ ಈ ಕುರಿತು ನ್ಯಾಯಾಲಯದ ಎದುರು ಅಭಿಪ್ರಾಯ ಮಂಡಿಸಲು ಸಿದ್ಧವಾಗಿರುವಂತೆ ಅವರು `ಟ್ರಾಯ್~ಗೆ ಸೂಚಿಸಿದ್ದಾರೆ.

ಮೊಬೈಲ್ ದೂರವಾಣಿ ಸಂಪರ್ಕ ಕಲ್ಪಿಸುವ ಮುನ್ನ ಗ್ರಾಹಕರು ನೀಡುವ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಕಂಪೆನಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಅವಿನಾಶ್ ಗೋಯೆಂಕ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ  ಸಲ್ಲಿಸಿದ್ದರು. ಪ್ರೀಪೇಯ್ಡ ಮತ್ತು ಪೋಸ್ಟ್ ಪೇಯ್ಡ ಸಂಪರ್ಕ ಕಲ್ಪಿಸುವಾಗ ಕಂಪೆನಿಗಳು ಸಂಗ್ರಹಿಸುವ ಮಾಹಿತಿ ಸಾಲದು ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.