ADVERTISEMENT

ತಮಿಳನಾಡು ಪಿಎಸ್ ಸಿ ಅಧ್ಯಕ್ಷರ ಮನೆ ಶೋಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:40 IST
Last Updated 14 ಅಕ್ಟೋಬರ್ 2011, 9:40 IST

ಚೆನ್ನೈ (ಪಿಟಿಐ): ಭ್ರಷ್ಟಾಚಾರ ನಿಗ್ರಹ ದಳವು ತಮಿಳುನಾಡಿನ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣ ಕೈಗೆತ್ತಿಕೊಂಡ ಎರಡು ತಿಂಗಳ ನಂತರ, ಶುಕ್ರವಾರ ಚೆನ್ನೈ  ಮತ್ತು ತಿರುಚಿರಪಳ್ಳಿಯಲ್ಲಿನ ಲೋಕಸೇವಾ ಆಯೋಗದ ಆಧ್ಯಕ್ಷ ಮತ್ತು ಸದಸ್ಯರ ಮನೆಗಳೂ ಸೇರಿದಂತೆ 14 ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿತು.

ತಮಿಳುನಾಡಿನ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಆರ್. ಸೇಲಾಮುತ್ತು ಮತ್ತು ಇತರರ ವಿರುದ್ಧ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ ಹಾಗೂ ತನಿಖೆಗೆ ಬಂದ ಅಧಿಕಾರಿಗಳ ವಿರುದ್ಧ ಅನುಚಿತವಾಗಿ ವರ್ತಿಸಿದ ಆರೋಪಗಳ ಕುರಿತು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ. 

ತಮಿಳುನಾಡು ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆದಿರುವುದನ್ನು ಗಮನಿಸಿದ ತಮಿಳುನಾಡು ಸರ್ಕಾರ, ಈ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ನಿರ್ದೆಶಕರಿಗೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT