ADVERTISEMENT

ತಮಿಳುನಾಡು ಲೋಕಸೇವ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಆಸ್ತಿಗಳ ಶೋಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:30 IST
Last Updated 14 ಅಕ್ಟೋಬರ್ 2011, 8:30 IST

 ಚೆನೈ (ಪಿಟಿಐ): ತಮಿಳುನಾಡಿನ ಲೋಕಸೇವ ಆಯೋಗದ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆಗೆ ಎರಡು ತಿಂಗಳ ನಂತರ ಭ್ರಷ್ಟಾಚಾರ ನಿಗ್ರಹ ದಳವು ತಿರುಚಿರಪಳ್ಳಿಯಲ್ಲಿನ ಲೋಕಸೇವ ಆಯೋಗದ ಆಧ್ಯಕ್ಷ ಮತ್ತು ಸದಸ್ಯರ ಚಿರಾಸ್ತಿಗಳ ಮೇಲೆ ಶುಕ್ರವಾರ ಶೋಧನ ಕಾರ್ಯ ನಡೆಸಿದೆ.

ತಮಿಳುನಾಡಿನ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಆರ್. ಸೇಲಾಮುತ್ತು ಮತ್ತು ಇತರರ ವಿರುದ್ಧ  ದುರ್ನಡತೆ, ಹಣಕಾಸಿನ ಅನುಕೂಲತೆ ಮತ್ತು ಇತರ ಅಧಿಕಾರಗಳನ್ನು ನಿಂದನೆಗೊಳಪಡಿಸಿದ ಆರೋಪವನ್ನು ಇವರ ವಿರುದ್ಧ ದಾಖಲಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೆಶಕರು ಆರೋಪಿಗಳ ಪಟ್ಟಿಯನ್ನು ಬಿಡುಗಡೆಗೊಳ್ಳಿಸಿದ್ದಾರೆ.

ಅಸಿಸ್ಟೆಂಟ್ ಡೆಂಟಲ್ ಸರ್ಜನ್ಸ್ ಹುದ್ದೆಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವ ಮೊದಲೇ ದುರ್ನಡತೆ, ಹಣಕಾಸಿನ ಪ್ರಯೋಜನ ಪಡೆಯಲು  ಆ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳು ಕೇಳಿದ್ದರು ಎಂದು ಆರೋಪದಲ್ಲಿ ಹೇಳಲಾಗಿದೆ.

ಇದಲ್ಲದೆ ಗ್ರೇಡ್ 2 ವಾಹನ ಪರಿವೀಕ್ಷಣ ಅಭ್ಯರ್ಥಿಗಳ ಆಯ್ಕೆ ಮಾಡುವ ಸ್ಥಾನದಲ್ಲಿನ ಅಧಿಕಾರಿಗಳನ್ನು ನಿಂದಿಸಿ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ದೆಶಕರು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿದ ನಂತರ ಭ್ರಷ್ಟಾಚಾರ ನಿಗ್ರಹ ದಳದ ನಿರ್ದೆಶಕರಿಗೆ ಸಂಬಂಧಪಟ್ಟ  ದಾಖಲೆಗಳನ್ನು ನೀಡದೇ ಅಪರಾಧ ವೆಸಗಿದ್ದಾರೆ. 

ಈ ಮೇಲಿನ ಎಲ್ಲಾ ಅರೋಪಗಳನ್ನು ವಿವಿಧ ಭ್ರಷ್ಟಾಚಾರ ಕಾಯ್ದೆಯ ವಿವಿಧ ಕಲಾಂನಡಿ ಪ್ರಕರಣ ದಾಖಲಿಸಿ ಚೆನೈ ಮತ್ತು ತಿರುಚಿರಪಳ್ಳಿ ಸೇರಿದಂತೆ 14 ನಗರಗಳಲ್ಲಿ ಶೋಧನಾ ಕಾರ್ಯ ನಡೆಯುತ್ತಿದೆ.

 ತಮಿಳುನಾಡು ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆದಿದೆ ಎಂದು ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡು ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳದ ನಿರ್ದೆಶಕರಿಗೆ ತಮಿಳುನಾಡು ಸರ್ಕಾರ ತನಿಖೆ ನಡೆಸುವಂತೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.