ADVERTISEMENT

ತಮ್ಮ ಕಚೇರಿಯಲ್ಲಿ ಕಳ್ಳಕಿವಿ: ಪ್ರಣವ್ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 11:00 IST
Last Updated 21 ಜೂನ್ 2011, 11:00 IST

ನವದೆಹಲಿ (ಪಿಟಿಐ): ತಮ್ಮ ಕಚೇರಿಯಲ್ಲಿ ಗುಪ್ತ ಧ್ವನಿಗ್ರಾಹಕವನ್ನು ಇಡಲಾಗಿದೆ ಎಂಬ ವರದಿಗಳ ಬಗ್ಗೆ ಜಾಗೃತಾ ಸಂಸ್ಥೆಗಳು ತನಿಖೆ ನಡೆಸಿದ್ದು ತನಿಖೆಯ ವೇಳೆಯಲ್ಲಿ ಅಂತಹ ಯಾವುದೇ ಉಪಕರಣಗಳೂ ಪತ್ತೆಯಾಗಿಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಗಳವಾರ ಇಲ್ಲಿ ಹೇಳಿದರು.

ತಮ್ಮ ಕಚೇರಿಯಲ್ಲಿನ ಸಂಭಾವ್ಯ ಭದ್ರತಾ ಲೋಪ ಕುರಿತ ವರದಿಗಳ ಬಗ್ಗೆ ಪ್ರಸ್ತಾಪಿಸಿದ ಅವರು ~ನನ್ನ ಕಚೇರಿಯಲ್ಲಿ ಗುಪ್ತ ಧ್ವನಿಗ್ರಾಹಕವನ್ನು ಇರಿಸಲಾಗಿದೆ ಎಂಬ ವರದಿಗಳ ಬಗ್ಗೆ ಜಾಗೃತಾ ಸಂಸ್ಥೆಗಳು ತನಿಖೆ ನಡೆಸಿದ್ದು, ಅವುಗಳಿಗೆ ಅಂತಹ ಯಾವುದೇ ಉಪಕರಣ ಲಭಿಸಿಲ್ಲ~ ಎಂದು ನುಡಿದರು.

ವರದಿಗಳ ಪ್ರಕಾರ ಹಣಕಾಸು ಸಚಿವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳೆದ ವರ್ಷ ಪತ್ರ ಬರೆದು ತಮ್ಮ ಕಚೇರಿಯಲ್ಲಿನ ಗಂಬೀರ ಭದ್ರತಾ ಲೋಪದ ಬಗ್ಗೆ ರಹಸ್ಯ ತನಿಖೆ ನಡೆಸುವಂತೆ ಕೋರಿದ್ದರು ಎಂದು ಹೇಳಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.