ADVERTISEMENT

ತಲೆಗೆ ಗಾಯ; ಕಾಲಿಗೆ ಶಸ್ತ್ರಚಿಕಿತ್ಸೆ!

ಪಿಟಿಐ
Published 23 ಏಪ್ರಿಲ್ 2018, 20:01 IST
Last Updated 23 ಏಪ್ರಿಲ್ 2018, 20:01 IST
ತಲೆಗೆ ಗಾಯ; ಕಾಲಿಗೆ ಶಸ್ತ್ರಚಿಕಿತ್ಸೆ!
ತಲೆಗೆ ಗಾಯ; ಕಾಲಿಗೆ ಶಸ್ತ್ರಚಿಕಿತ್ಸೆ!   

ನವದೆಹಲಿ : ದೆಹಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಲೆಗೆ ಗಾಯವಾಗಿದ್ದ ರೋಗಿಯ ಕಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಇಲ್ಲಿನ ಸುಶ್ರುತ ಟ್ರಾಮಾ ಸೆಂಟರ್‌ನಲ್ಲಿ ಈ ಅಚಾತುರ್ಯ ನಡೆದಿದೆ. ಬೇರೊಬ್ಬ ರೋಗಿಯ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸುವ ಬದಲು ತಲೆಗೆ ಗಾಯವಾಗಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

‘ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ್ದರಿಂದ ಯಾವ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂಬ ಅರಿವು ರೋಗಿಗೂ ಇರಲಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕ ಅಜಯ್ ಬಹಲ್ ಹೇಳಿದ್ದಾರೆ. ತಪ್ಪಾಗಿರುವುದು ಗಮನಕ್ಕೆ ಬಂದ ಕೂಡಲೇ ವೈದ್ಯಾಧಿಕಾರಿಗಳು ಆತನಿಗೆ ಸರಿಯಾದ ಚಿಕಿತ್ಸೆ ನೀಡಿದ್ದಾರೆ.

ADVERTISEMENT

ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಿದ್ದು, ಯಾವುದೇ ಶಸ್ತ್ರಕ್ರಿಯೆ ನಡೆಸದಂತೆ ತಪ್ಪಿತಸ್ಥ ವೈದ್ಯನಿಗೆ ನಿರ್ಬಂಧ ವಿಧಿಸಲಾಗಿದೆ.

ಇತ್ತೀಚೆಗೆ ಏಮ್ಸ್‌ನ ವೈದ್ಯರೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಡಯಾಲಿಸಿಸ್ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.