ADVERTISEMENT

ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನ: ಪಂಚಾಯಿತಿ ತೀರ್ಪು ಒಪ್ಪದ ಮಗ

ಪಿಟಿಐ
Published 11 ಜೂನ್ 2018, 19:23 IST
Last Updated 11 ಜೂನ್ 2018, 19:23 IST

ಮಥುರಾ: ತನ್ನ ತಾಯಿಯ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಳ್ಳಿಯ ಪಂಚಾಯಿತಿ ನೀಡಿದ ತೀರ್ಪಿನಿಂದ ತೃಪ್ತನಾಗದ ಮಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ಇಲ್ಲಿನ ಬಾಕ್ಲಗಡಿ ಗ್ರಾಮದ ನಿವಾಸಿ ಪಪ್ಪು ಎಂಬಾತ ಶುಕ್ರವಾರ ರಾತ್ರಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆತನಿಗೆ ತನ್ನ ಚಪ್ಪಲಿಯಿಂದ ಐದು ಬಾರಿ ಹೊಡೆದು, ಪ್ರಕರಣವನ್ನು ಊರಿನಲ್ಲಿಯೇ ಇತ್ಯರ್ಥಪಡಿಸಿಕೊಳ್ಳು ವಂತೆ ಪಂಚಾಯಿತಿ ಮುಖಂಡರು ಮಹಿಳೆಗೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಮಗ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಶೋಧ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT