ADVERTISEMENT

ತಾಯಿ ಹೈಹಿಲ್ಸ್‌ ಧರಿಸಿದ್ದೇ ಮಗುವಿನ ಪ್ರಾಣಕ್ಕೆ ಎರವಾಯ್ತೆ?

ಏಜೆನ್ಸೀಸ್
Published 7 ಮೇ 2018, 13:50 IST
Last Updated 7 ಮೇ 2018, 13:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ತಾಯಿಯೊಬ್ಬರು ತಾವು ಧರಿಸಿದ್ದ ಹೈ ಹಿಲ್ಸ್‌ ಚಪ್ಪಲಿಗಳಿಂದಾಗಿ ಎಡವಿ, ಕೈಯಲ್ಲಿದ್ದ ಆರು ತಿಂಗಳ ಗಂಡುಕೂಸು ಕೈಜಾರಿ ಬಿದ್ದು ಸಾವಿಗಿಡಾದ ಘಟನೆ ಇಲ್ಲಿನ ಮಾತೊಶ್ರೀ ಹಾಲ್‌ನಲ್ಲಿ ನಡೆದಿದೆ.

ಮೃತ ಮಗುವಿನ ಹೆಸರು ಮೊಹಮ್ಮದ್‌ ಶೇಖ್‌. ಮಗುವಿನೊಂದಿಗೆ ತಾಯಿ ಫೆಮಿದಾ ಶೇಖ್ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಈ ಹಾಲ್‌ಗೆ ಬಂದಿದ್ದರು. ಹೈಹಿಲ್ಸ್‌ ಧರಿಸಿದ್ದ ಫೆಮಿದಾ ಶೇಖ್‌, ಮಗುವನ್ನು ಎತ್ತಿಕೊಂಡು ಎರಡನೇ ಮಹಡಿಯಿಂದ ನೆಲಮಹಡಿಗೆ ಮೆಟ್ಟಿಲುಗಳಿಂದ ಇಳಿಯುವಾಗ ಎಡವಿದರು. ಆಗ ಅವರ ಕೈಲಿದ್ದ ಮಗು ಜಾರಿ ಬಿತ್ತು.

‘ಕೆಳಗೆ ಬಿದ್ದ ರಭಸಕ್ಕೆ ಮಗುವಿನ ಬೆನ್ನುಮೂಳೆಗೆ ಪೆಟ್ಟಾಗಿತ್ತು. ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮಗುವಿನ ಜೀವ ಹಾರಿಹೋಗಿತ್ತು’ ಎಂದು ಸಂಬಂಧಿಕರು ಇಲ್ಲಿನ ಮಹಾತ್ಮ ಪುಲೆ ಠಾಣೆಯ ಇನ್‌ಸ್ಪೆಕ್ಟರ್‌ಗೆ ತಿಳಿಸಿದ್ದಾರೆ.

ADVERTISEMENT

ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.