ADVERTISEMENT

ತಿರುಮಲದಲ್ಲಿ ಕಾಳ್ಗಿಚ್ಚು: ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ತಿರುಪತಿ (ಐಎಎನ್‌ಎಸ್‌): ಮೂರು ದಿನಗಳಿಂದ ಆಂಧ್ರ­ಪ್ರದೇಶದ ಶೇಷಾಚಲಂ  ಅರಣ್ಯದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ನಂದಿಸಲು ವಾಯುಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು ಮತ್ತು  100 ಸೇನಾ ಸಿಬ್ಬಂದಿಯಿಂದ ಶತಪ್ರಯತ್ನ ನಡೆಯುತ್ತಿದೆ.

ತಿರುಪತಿಯಿಂದ ಮೂರು ಕಿ.ಮೀ ದೂರದಲ್ಲಿರುವ ರೇಣುಗುಂಟ ವಿಮಾನ ನಿಲ್ದಾಣದಿಂದ ಹೊರಟ ಎಮ್‌ಐ–17 ಹಾಗೂ  ಸಿ–130 ತಲಾ ಎರಡು ಹೆಲಿಕಾಪ್ಟರ್‌ಗಳು  ನೀರು  ಮತ್ತು  ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಬೆಂಕಿ ನಂದಿಸಲು ಯತ್ನಿಸುತ್ತಿವೆ.  ಇದಕ್ಕೂ ಮುನ್ನ ಅಗ್ನಿಶಾಮಕ ದಳದ ಪ್ರಧಾನ ನಿರ್ದೇಶಕ ಸಾಂಬಶಿವ ರಾವ್‌,  ಅರಣ್ಯ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.