ADVERTISEMENT

ತಿವಾರಿ ಡಿಎನ್ಎ ಪರೀಕ್ಷಾ ಪ್ರಕ್ರಿಯೆ: 19ರಂದು ಕೋರ್ಟ್ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:40 IST
Last Updated 8 ಫೆಬ್ರುವರಿ 2011, 10:40 IST
ತಿವಾರಿ ಡಿಎನ್ಎ ಪರೀಕ್ಷಾ ಪ್ರಕ್ರಿಯೆ: 19ರಂದು ಕೋರ್ಟ್ ತೀರ್ಮಾನ
ತಿವಾರಿ ಡಿಎನ್ಎ ಪರೀಕ್ಷಾ ಪ್ರಕ್ರಿಯೆ: 19ರಂದು ಕೋರ್ಟ್ ತೀರ್ಮಾನ   

ನವದೆಹಲಿ (ಪಿಟಿಐ): ಪಿತೃತ್ವ ಖಟ್ಲೆಗೆ ಸಂಬಂಧಿಸಿದಂತೆ ವಂಶವಾಹಿ (ಡಿಎನ್ ಎ) ಪರೀಕ್ಷೆಗಾಗಿ ಹಿರಿಯ ಕಾಂಗ್ರೆಸ್ ನಾಯಕ ಎನ್. ಡಿ. ತಿವಾರಿ ಅವರ ರಕ್ತದ ಮಾದರಿಯನ್ನು ಹೇಗೆ ಮತ್ತು ಎಲ್ಲಿ ತೆಗೆದುಕೊಳ್ಳಬೇಕು ಎಂಬ ಬಗೆಗಿನ ಔಪಚಾರಿಕ ವಿಧಿ ವಿಧಾನಗಳನ್ನು ಫೆಬ್ರುವರಿ 19ರ ಶನಿವಾರ ಇತ್ಯರ್ಥಗೊಳಿಸಲು ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಮಾನಿಸಿತು. . ತನ್ನ ತಾಯಿ ಉಜ್ವಲ ಶರ್ಮಾ ಜೊತೆಗಿನ ಬಾಂಧವ್ಯದ ಪರಿಣಾಮವಾಗಿಯೇ ತಾನು ಜನಿಸಿರುವುದಾಗಿ ದೆಹಲಿ ಯುವಕ ರೋಹಿತ್ ಶೇಖರ್ ಪ್ರತಿಪಾದಿಸುತ್ತಿದ್ದಾರೆ.ಶೇಖರ್ ಅವರು ಹೂಡಿರುವ ಪಿತೃತ್ವ ಖಟ್ಲೆಗೆ ಸಂಬಂಧಿಸಿದಂತೆ ವಂಶವಾಹಿ (ಡಿಎನ್ಎ) ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೈಕೋರ್ಟಿನ ಏಕ ಸದಸ್ಯ ಪೀಠವು ಡಿಸೆಂಬರ್ 23ರಂದು ತಿವಾರಿ ಅವರಿಗೆ ಸೂಚಿಸಿತ್ತು.

ದೆಹಲಿಯ ಯುವಕ ರೋಹಿತ್ ಶೇಖರ್ ಮತ್ತು ತಿವಾರಿ ಅವರ ವಕೀಲರ ಸಮ್ಮುಖದಲ್ಲಿಯೇ ಕಾಂಗ್ರೆಸ್ ನಾಯಕನ ರಕ್ತದ ಮಾದರಿ ತೆಗೆದುಕೊಳ್ಳುವ ವಿಧಿ ವಿಧಾನಗಳನ್ನು ತಾನು ನಿರ್ಧರಿಸುವುದಾಗಿ ಹೈಕೋರ್ಟ್ ನ ಜಂಟಿ ರಿಜಿಸ್ಟ್ರಾರ್ ದೀಪಕ್ ಗರ್ಗ್ ಅವರು ಇಲ್ಲಿ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT