ನವದೆಹಲಿ (ಪಿಟಿಐ): ಮನುಷ್ಯನ ಸಂಪೂರ್ಣ ದೇಹವನ್ನು ಸ್ಕ್ಯಾನರ್ ಮಾಡುವ ಸಾಧನ ಅಳವಡಿಸಿಕೊಳ್ಳಲಿರುವ ದೇಶದ ಮೊದಲ ಕಾರಾಗೃಹ ಎಂಬ ಹಿರಿಮೆಗೆ ತಿಹಾರ್ ಜೈಲು ಪಾತ್ರವಾಗಲಿದೆ.
`ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿದ ಬಳಿಕವಷ್ಟೇ ಪ್ರವೇಶ ನೀಡಲಾಗುತ್ತದೆ. ದೇಶದ ಈ ಅತಿ ದೊಡ್ಡ ಜೈಲಿನ ಒಳಗೆ ಮಾದಕ ವಸ್ತು, ಮೊಬೈಲ್ ಮತ್ತು ಶಸ್ತ್ರಾಸ್ತ್ರ ಸಾಗಿಸದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ~ ಎಂದು ಡಿಐಜಿ ಆರ್.ಎನ್. ಶರ್ಮ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.