ADVERTISEMENT

ತೆರಿಗೆ ಬಾಕಿದಾರರ ಹೆಸರು ಬಹಿರಂಗ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ತೆರಿಗೆ ಬಾಕಿದಾರರ ಹೆಸರು ಬಹಿರಂಗ
ತೆರಿಗೆ ಬಾಕಿದಾರರ ಹೆಸರು ಬಹಿರಂಗ   

ನವದೆಹಲಿ: ಒಂದು ಕೋಟಿ ರೂಪಾಯಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಹೆಸರನ್ನು ಬಹಿರಂಗಪಡಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

ಕಳೆದ ವರ್ಷದಿಂದಲೇ ಆದಾಯ ತೆರಿಗೆ ಇಲಾಖೆ ತೆರಿಗೆ ಬಾಕಿದಾರರ ಹೆಸರು ಪ್ರಕಟಿಸುವ ಕೆಲಸ ಮಾಡುತ್ತಿದೆ. ಆಗಿನಿಂದ ರಾಷ್ಟ್ರೀಯ ದಿನ ಪತ್ರಿಕೆಗಳಲ್ಲಿ 67 ತೆರಿಗೆ ಬಾಕಿದಾರರ ಹೆಸರು ಪ್ರಕಟಿಸಲಾಗಿದೆ.

ಹೆಸರಿನ ಜತೆಗೆ ತೆರಿಗೆ ಬಾಕಿದಾರರ ವಿಳಾಸ, ಸಂಪರ್ಕ ಸಂಖ್ಯೆಗಳು, ಪ್ಯಾನ್‌ ಕಾರ್ಡ್‌ ಸಂಖ್ಯೆ ಪ್ರಕಟಿಸಲಾಗುತ್ತಿದೆ. ಕಂಪೆನಿಗಳು ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಅಂತಹ ಕಂಪೆನಿಗಳ ಷೇರುದಾರರ ಹೆಸರು ಮತ್ತು ಇತರ ಮಾಹಿತಿ ಪ್ರಕಟಿಸಲಾಗುತ್ತಿದೆ.

ಆದರೆ ಕಳೆದ ವರ್ಷ ₹20–30 ಕೋಟಿಯಷ್ಟು ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಹೆಸರು ಮಾತ್ರ ಪ್ರಕಟಿಸಲಾಗುತ್ತಿತ್ತು. ಆದರೆ ಈ ಆರ್ಥಿಕ ವರ್ಷದಿಂದ ಒಂದು ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಹೆಸರುಗಳನ್ನು ಕೂಡ ಪ್ರಕಟ ಮಾಡಲು ನಿರ್ಧರಿಸಲಾಗಿದೆ.

‘ಮುಂದಿನ ವರ್ಷ ಜುಲೈ 31ರೊಳಗೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲರ ಹೆಸರು ಪ್ರಕಟಿಸಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ನೇರ ತೆರಿಗೆ ಮಂಡಳಿಯು ಈ ಬಗ್ಗೆ ಆದೇಶವನ್ನೂ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT