ADVERTISEMENT

ದಾದ್ರಿ ಪ್ರಕರಣಕ್ಕೆ ರಾಜಕೀಯ ಬಣ್ಣ ಬೇಡ: ರಾಜನಾಥ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 8:55 IST
Last Updated 4 ಅಕ್ಟೋಬರ್ 2015, 8:55 IST

ನವದೆಹಲಿ (ಪಿಟಿಐ): ಇಕ್ಲಾಖ್‌ ಹತ್ಯೆ ಪ್ರಕರಣ ಒಂದು ದುರಾದೃಷ್ಟಕರ ಇದಕ್ಕೆ ರಾಜಕೀಯ ಅಥವಾ ಕೋಮುವಾದಿ ಬಣ್ಣ ಬಳಿಯುವುದು ಬೇಡ ಎಂದು ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಮನವಿ ಮಾಡಿದ್ದಾರೆ.

ಈ ಹತ್ಯೆ ಪ್ರಕರಣ ದುರಾದೃಷ್ಟಕರವಾಗಿದ್ದು  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜಕೀಯ ಪಕ್ಷಗಳು  ಈ ಪ್ರಕರಣವನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಳ್ಳುವುದು ಬೇಡ ಎಂದು ರಾಜನಾಥ್‌ ಸಿಂಗ್‌ ಮನವಿ ಮಾಡಿದ್ದಾರೆ.  ನಾವು ಎರಡು ಸಮುದಾಯಗಳ ನಡುವೆ ಸಹಬಾಳ್ವೆ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಘಟನೆಯನ್ನು ಖಂಡಿಸಿರುವ ರಾಜನಾಥ್‌ ಸಿಂಗ್‌  ಈಗಾಗಲೇ 8 ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜನಾಥ್‌ ಸಿಂಗ್‌ ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.