ADVERTISEMENT

ದಾರಿದ್ರ್ಯ ರೇಖೆ ಮಾನದಂಡ ಬದಲು ಅಯೋಗದ ಅಭಿಪ್ರಾಯವಲ್ಲ: ಮಾಂಟೆಕ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 10:10 IST
Last Updated 3 ಅಕ್ಟೋಬರ್ 2011, 10:10 IST

ನವದೆಹಲಿ (ಪಿಟಿಐ/ ಐಎಎನ್ ಎಸ್): ಸುಪ್ರೀಂಕೋರ್ಟಿನ ಮುಂದೆ ಇರಿಸಲಾಗಿರುವ ದಾರಿದ್ರ್ಯ ರೇಖೆಯು ಯೋಜನಾ ಆಯೋಗದ ಅಭಿಪ್ರಾಯವಲ್ಲ, ಆದರೆ ಸಮಿತಿಯ ಅಭಿಪ್ರಾಯ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಲು ತೆಂಡೂಲ್ಕರ್ ಸಮಿತಿಯ ದಾರಿದ್ರ್ಯ ರೇಖೆಯನ್ನು ಅನ್ವಯಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಅನುದಾನಿತ ಆಹಾರ ಮತ್ತಿತರ ಸವಲತ್ತುಗಳನ್ನು ಒದಗಿಸಲು ಯೋಜನಾ ಆಯೋಗವು ದಾರಿದ್ರ್ಯ ರೇಖೆಯ ನಿಗದಿತ ಮಿತಿಗಳನ್ನು ಅನುಸರಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ದಾರಿದ್ರ್ಯ ರೇಖೆಯ ಮಾನದಂಡವನ್ನು ಬದಲಿಸಿದ ತೆಂಡೂಲ್ಕರ್ ಸಮಿತಿಯ ಕ್ರಮವು ಸೋನಿಯಾ ಗಾಂಧಿ ನೇತೃತ್ವದ ಪ್ರಭಾವಶಾಲಿಯಾದ ರಾಷ್ಟ್ರೀಯ ಸಲಹಾ ಮಂಡಳಿ (ನ್ಯಾಕ್) ಸದಸ್ಯರು ಸೇರಿದಂತೆ ಹಲವರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.