ನವದೆಹಲಿ (ಐಎಎನ್‌ಎಸ್): `ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಯಾವುದೇ ಮಾಟ-ಮಂತ್ರವಿಲ್ಲ. ಸರ್ಕಾರ ಕೂಡ ಭ್ರಷ್ಟಾಚಾರವನ್ನು ಪೋಷಿಸುತ್ತಿಲ್ಲ. ಆದರೆ, ಅದರ ನಿರ್ಮೂಲನೆಗೆ ಅಧಿಕಾರಿಗಳು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು~ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಇಲ್ಲಿ ಅಧಿಕಾರಿಗಳಿಗೆ ಕರೆ ನೀಡಿದರು.
ಶನಿವಾರ ಆರಂಭವಾದ 7ನೇ ನಾಗರಿಕ ಸೇವಾ ದಿನ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಅವರು `ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾವುದೇ ಮಾಟ-ಮಂತ್ರ ಇರುವುದಿಲ್ಲ. ಅದರ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸಬೇಕು~ ಎಂದರು.
ಯಾವ ಅಧಿಕಾರಿಗಳು ಭ್ರಷ್ಟಾಚಾರನ್ನು ಪ್ರೋತ್ಸಾಹಿಸಬಾರದು. ಭ್ರಷ್ಟಾಚಾರವನ್ನು ಕಡಿವಾಣದಲ್ಲಿಡಲು ಅಧಿಕಾರಿಗಳಿಗೆ ನಮ್ಮ ಸರ್ಕಾರ ಉತ್ತಮ ಪರಿಸರವನ್ನು ಕಲ್ಪಿಸಿಕೊಡುತ್ತದೆ.
ದೇಶದ ಕಾನೂನಿನ ಪ್ರಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳನ್ನು ನಮ್ಮ ಸರ್ಕಾರ ಪ್ರೋತ್ಸಾಹಿಸುತ್ತದೆ. ಯಾವ ವ್ಯಕ್ತಿಯು ಭ್ರಷ್ಟಾಚಾರದ ಸುಳಿಗೆ ಸಿಲಕಬಾರದು~ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಯಾವ ಅಧಿಕಾರಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಪ್ರಬಲ ನಿರ್ಧಾರಗಳನ್ನು ಕೈಗೊಳ್ಳದೆ ಸುರಕ್ಷಿತವಾಗಿ ಇರಬಹುದು. ಆದರೆ ಅಂತಿಮವಾಗಿ ಆತನಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಯಾವುದೇ ಕೊಡುಗೆ ಇರುವುದಿಲ್ಲ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.