ADVERTISEMENT

ದೂರು ನೀಡಲು ಹೋದ ವ್ಯಕ್ತಿಯನ್ನು ತಳ್ಳಿದ ಯೋಗಿ ಆದಿತ್ಯನಾಥ್: ಆರೋಪ

ಏಜೆನ್ಸೀಸ್
Published 4 ಏಪ್ರಿಲ್ 2018, 5:31 IST
Last Updated 4 ಏಪ್ರಿಲ್ 2018, 5:31 IST

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖಪುರದಲ್ಲಿ ನಡೆಸಿದ್ದ ಜನತಾ ದರ್ಬಾರ್‌ನಲ್ಲಿ ವ್ಯಕ್ತಿಯೊಬ್ಬರನ್ನು ತಳ್ಳಿದ್ದಾರೆ ಎಂಬ ಆರೋಪ ವರದಿಯಾಗಿದೆ.

‘ಶಾಸಕ ಅಮನ್‌ಮಣಿ ತ್ರಿಪಾಠಿ ನನ್ನ ಭೂಮಿಯನ್ನು ಕಬಳಿಸಿದ್ದಾರೆ. ಈ ಕುರಿತು ದೂರು ನೀಡಲು ಮುಖ್ಯಮಂತ್ರಿಗಳ ಬಳಿ ತೆರಳಿದ್ದೆ. ನನ್ನ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ನೀಡಿದೆ. ಅವುಗಳನ್ನು ಎಸೆದ ಅವರು ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದರು’ ಎಂದು ಲಖನೌ ನಿವಾಸಿ ಆಯುಷ್ ಸಿಂಘಲ್ ಆರೋಪಿಸಿದ್ದಾರೆ.

ಈ ಕುರಿತು ಗೋರಖಪುರದ ಜಿಲ್ಲಾಧಿಕಾರಿ ಕೆ. ವಿಜಯೇಂದ್ರ ಪಾಂಡಿಯನ್ ಸ್ಪಷ್ಟನೆ ನೀಡಿದ್ದಾರೆ. ‘ಆಯುಷ್ ಸಿಂಘಲ್ ಸೂಕ್ತ ದಾಖಲೆಗಳಿಲ್ಲದೆ ಬಂದಿದ್ದರು. ಹೀಗಾಗಿ ಅರ್ಜಿ ತುಂಬಿಕೊಂಡು ಬರುವಂತೆ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ದಾಖಲೆಗಳಿಲ್ಲದ ಕೆಲವು ದೂರುಗಳು ಬಂದಾಗ ಅರ್ಜಿ ತುಂಬಿಕೊಡುವಂತೆ ಹೇಳಲಾಗುತ್ತದೆ. ಆಯುಷ್ ಬರಿಗೈನಲ್ಲಿ ಬಂದಿದ್ದರು. ಅವರು ಪ್ರಸ್ತಾಪಿಸಿರುವ ದೂರು ಭೂಮಿ ವಿಭಜನೆಗೆ ಸಂಬಂಧಿಸಿದ್ದಾಗಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.