ADVERTISEMENT

ದೆಹಲಿ ಚುನಾವಣೆ: ದಾಖಲೆ ಮತದಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 13:08 IST
Last Updated 4 ಡಿಸೆಂಬರ್ 2013, 13:08 IST
ಛತರ್‌ಪುರ್‌ನ ಮತಗಟ್ಟೆವೊಂದರಲ್ಲಿ ಮತದಾನಕ್ಕಾಗಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ. -ಪಿಟಿಐ ಚಿತ್ರ.
ಛತರ್‌ಪುರ್‌ನ ಮತಗಟ್ಟೆವೊಂದರಲ್ಲಿ ಮತದಾನಕ್ಕಾಗಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ. -ಪಿಟಿಐ ಚಿತ್ರ.   

ನವದೆಹಲಿ (ಪಿಟಿಐ): ಮೂರು ಪ್ರಮುಖ ಪಕ್ಷಗಳ ನಡುವೆ ತುರುಸಿನ ತ್ರಿಕೋನ ಸ್ಪರ್ಧೆ ಹುಟ್ಟುಹಾಕಿದ್ದ  ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ತೆರೆಬಿದ್ದಿದೆ. ಇದೇ ಮೊದಲ ಬಾರಿ ಶೇ.65 ರಷ್ಟು ದಾಖಲೆಯ ಮತದಾನವಾಗಿದ್ದು, ಇದು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

`ಸುಮಾರು ಶೇ.65ರಷ್ಟು ಮತದಾನವಾಗಿದ್ದು, ಇನ್ನೂ 70 ಸಾವಿರ ಜನರು ಮತಚಲಾಯಿಸಲು ಸರದಿ ಸಾಲಿನಲ್ಲಿರುವುದರಿಂದ ಈ ಅಂಕಿಅಂಶಗಳು ಬದಲಾಗಬಹುದು. ಎಲ್ಲೆಡೆಯಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ' ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ತಿಳಿಸಿದರು.

ಹಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆಯಿಂದ ಮತದಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಅದಕ್ಕಾಗಿ ಅಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಈ ಬಾರಿ ಶೇ. 70-75ರಷ್ಟು ಮತದಾನ ಆಗಲಿದೆ ಎನ್ನುವುದು ನಮ್ಮ ನಿರೀಕ್ಷೆ ಎನ್ನುತ್ತಾರೆ ದೆಹಲಿ ಚುನಾವಣಾ ಆಯೋಗದ ಮುಖ್ಯಸ್ಥರಾದ ವಿಜಯ್ ದೇವ್.

1993ರಲ್ಲಿ ಮೊದಲ ಬಾರಿಗೆ ಶೇ.61.75ರಷ್ಟು ಮತದಾನವಾಗಿದ್ದು ಇವರೆಗಿನ ಅತಿ ಹೆಚ್ಚು ದಾಖಲೆಯಾಗಿತ್ತು.

ADVERTISEMENT

2008ರಲ್ಲಿ ಶೇ.57.58 ಮತದಾರರು ಮತ ಚಲಾಯಿಸಿದ್ದರು.

ಸುಮಾರು 1.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಈ ಚುನಾವಣೆಯಲ್ಲಿ ಒಂದೆಡೆ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸತತ ನಾಲ್ಕನೇಯ ಅವಧಿಗೂ ಆಳಿತದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದ್ದರೆ, ಇನ್ನೊಂದೆಡೆ ಪ್ರಮಖ ವಿರೋಧ ಪಕ್ಷವಾದ ಬಿಜೆಪಿ ಅಧಿಕಾರ ಕಸಿಯಲು ಶತಪ್ರಯತ್ನ ನಡೆಸುತ್ತಿದೆ. ಇವೆರಡ ನಡುವೆ ತುರಿಕೊಳ್ಳಲು ಪ್ರಯತ್ನಿಸುತ್ತಿರುವ `ಆಮ್ ಆದ್ಮಿ ಪಾರ್ಟಿ' ಎಲ್ಲರ ಕೇಂದ್ರಬಿಂದುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.