
ಪ್ರಜಾವಾಣಿ ವಾರ್ತೆನವದೆಹಲಿ (ಐಎಎನ್‌ಎಸ್): ರಾಜಧಾನಿ ನವದೆಹಲಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಜನರನ್ನು ತೀವ್ರ ಸಂಕಷ್ಟಗಳಿಗೆ ಗುರಿ ಮಾಡಿದೆ. ಪ್ರತಿಭಟನೆಗಳು ಹೆಚ್ಚುತ್ತಿವೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ದೀರ್ಘ ಕಾಲದ ವರೆಗೆ ಸಮಸ್ಯೆ ಮುಂದುವರಿಯಲಿದೆ ಎಂದು ತಜ್ಞರು ಹೇಳಿದ್ದಾರೆ.
ಉಷ್ಣಾಂಶದ ಹೆಚ್ಚಳದಿಂದ ನೀರಿನ ಕೊರತೆ ಕಳೆದೆರಡು ವಾರದಿಂದ ತೀವ್ರವಾಗಿದ್ದು, ತೊಂದರೆಗೀಡಾದ ಜನಸಾಮಾನ್ಯರು ಹಾಗೂ ಪ್ರತಿಭಟನಾಕಾರರು ಸಂಬಂಧಿಸಿದವರೊಂದಿಗೆ ಘರ್ಷಣೆಗಿಳಿದಿದ್ದಾರೆ.
ನೆರೆಯ ಹರಿಯಾಣ ದೆಹಲಿಗೆ ನೀರಿನ ಪೂರೈಕೆಯನ್ನು ಕಡಿಮೆ ಮಾಡಿದ್ದರಿಂದ ಈ ದೊಡ್ಡ ಸಮಸ್ಯೆ ತಲೆದೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.