ADVERTISEMENT

ದೆಹಲಿ: ಮಣಿಪುರ ಮೂಲದ ಉಗ್ರನ ಬಂಧನ

ಏಜೆನ್ಸೀಸ್
Published 2 ಡಿಸೆಂಬರ್ 2017, 10:56 IST
Last Updated 2 ಡಿಸೆಂಬರ್ 2017, 10:56 IST
ದೆಹಲಿ: ಮಣಿಪುರ ಮೂಲದ ಉಗ್ರನ ಬಂಧನ
ದೆಹಲಿ: ಮಣಿಪುರ ಮೂಲದ ಉಗ್ರನ ಬಂಧನ   

ನವದೆಹಲಿ: ಮಣಿಪುರ ಮೂಲದ ‘ಕಾಂಗ್ಲೈಪಾಕ್‌ ಕಮ್ಯುನಿಸ್ಟ್‌ ಪಕ್ಷ(ಕೆಸಿಪಿ)’ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಕೆಸಿಪಿ ಸಂಘಟನೆಗೆ ಧನ ಸಂಗ್ರಹ, ಅಕ್ರಮ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಸಾಗಿಸಲು ಸಕ್ರಿಯವಾಗಿದ್ದ ಮಣಿಪುರ ಮೂಲದ ಸನಬಮ್‌ ಇನೋಬಿ ಎಂಬಾತನನ್ನು ನವದೆಹಲಿಯಲ್ಲಿ ಬಂಧಿಸಿರುವುದಾಗಿ ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಜನವರಿಯಲ್ಲಿ ಕೆಸಿಪಿ ಮುಖ್ಯಸ್ಥ ಖೋಯಿರಾಮ್‌ ರಂಜಿತ್‌ ಸಿಂಗ್‌, ಆತನ ಮಹಿಳಾ ಸಹಾಯಕಿ ಇರುಂಗ್ಬಾಮ್‌ ಸನಾತೊಂಬಿ ದೇವಿ ಹಾಗೂ ಮತ್ತೊಬ್ಬ ಸಹಾಯಕ ಪಿ.ಪ್ರೇಮ್‌ ಕುಮಾರ್‌ ಮಣಿಪುರದ ಮಯೂರ್‌ ವಿಹಾರ್‌ ಎಂಬಲ್ಲಿ ದೆಹಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು.

ADVERTISEMENT

ಮಾರ್ಚ್‌ನಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು. ‌ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ಎನ್‌ಐಎ ಮೂವರ ವಿರುದ್ಧ ಕಳೆದ ಜುಲೈನಲ್ಲಿ ಐಪಿಸಿ 120ಬಿ ಅಡಿಯಲ್ಲಿ ಆರೋಪ ಪಟ್ಟಿ ದಾಖಲಿಸಿಕೊಂಡಿತ್ತು.

ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದಾಗಲೇ ಸನಬಮ್‌ ಸೆರೆಯಾಗಿರುವುದರಿಂದ ತನಿಖೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.