ADVERTISEMENT

ದೆಹಲಿ: 12 ದಿನದಲ್ಲಿ 100 ಮಕ್ಕಳು ಕಣ್ಮರೆ..!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 11:25 IST
Last Updated 13 ಫೆಬ್ರುವರಿ 2011, 11:25 IST

ನವದೆಹಲಿ (ಪಿಟಿಐ): ಈ ತಿಂಗಳಲ್ಲಿ ದೆಹಲಿ ತಲೆ ತಗ್ಗಿಸುವಂತಹ ಶತಕವೊಂದನ್ನು ಭಾರಿಸಿದೆ! ಫೆಬ್ರುವರಿ ತಿಂಗಳ ಮೊದಲ 12 ದಿನಗಳಲ್ಲಿ ಒಟ್ಟು 100 ಮಂದಿ ಮಕ್ಕಳು ರಾಜಧಾನಿಯಲ್ಲಿ ನಾಪತ್ತೆಯಾಗಿದ್ದಾರೆ.

ಹೀಗೆ ಕಣ್ಮರೆಯಾಗಿರುವ 100 ಮಂದಿ ಮಕ್ಕಳಲ್ಲಿ 65 ಮಂದಿ ಬಾಲಕಿಯರು. ಕಳೆದ ತಿಂಗಳಲ್ಲಿ ರಾಜಧಾನಿಯಲ್ಲಿ ಒಟ್ಟು 122 ಮಂದಿ ಕಣ್ಮರೆಯಾಗಿದ್ದಾರೆ.

ಈ ವರ್ಷದಲ್ಲಿ ಈವರೆಗೆ ಒಟ್ಟು 222 ಮಂದಿ ಮಕ್ಕಳು ರಾಜಧಾನಿ ದೆಹಲಿಯಲ್ಲಿ ನಾಪತ್ತೆಯಾಗಿದ್ದಾರೆ. ಅಂದರೆ ಪ್ರತಿದಿನ ಐವರು ಮಕ್ಕಳು ಕಣ್ಮರೆಯಾಗಿದ್ದಾರೆ. ಕಣ್ಮರೆ ಪ್ರಮಾಣ ಇದೇ ರೀತಿ ಮುಂದುವರಿದರೆ ಕಳೆದ ವರ್ಷ ಸಂಭವಿಸಿದ ಇಂತಹ 1,179 ಪ್ರಕರಣಗಳ ಸಂಖ್ಯೆಯನ್ನು ಇದು ಹಿಂದಿಕ್ಕುವ ಸಾಧ್ಯತೆ ಇದೆ.

~ಈ ತಿಂಗಳಲ್ಲಿ ಕಣ್ಮರೆಯಾಗುತ್ತಿರುವ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ನಾವು ಎಲ್ಲ ಪ್ರಕರಣಗಳ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇ ಒಂದು ಸಾಮ್ಯತೆ ಇರುವಂತೆ ಕಾಣುತ್ತಿಲ್ಲ. ನಗರದಲ್ಲಿ ಸಂಘಟಿತವಾಗಿ ಈ ಕೃತ್ಯ ಎಸಗುತ್ತಿರುವಂತೇನೂ ಕಾಣಿಸುತ್ತಿಲ್ಲ~ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ದೆಹಲಿಯ ಪೊಲೀಸ್ ಅಂಕಿ ಅಂಶಗಳ ಪ್ರಕಾರ ದೆಹಲಿ ಹೊರವಲಯದಲ್ಲಿ ಹೆಚ್ಚು ಕಣ್ಮರೆ ಪ್ರಕರಣಗಳು ಘಟಿಸಿವೆ ಹೊರ ದೆಹಲಿಯಲ್ಲಿ 20 ಮಕ್ಕಳು ಕಣ್ಮರೆಯಾಗಿದ್ದರೆ, ಪಶ್ಚಿಮ ದೆಹಲಿಯಲ್ಲಿ 19, ದಕ್ಷಿಣ ದೆಹಲಿಯಲ್ಲಿ 12, ನೈಋತ್ಯ ದೆಹಲಿಯಲ್ಲಿ 11 ಮಕ್ಕಳು ನಾಪತ್ತೆಯಾಗಿದ್ದಾರೆ.

ಫೆಬ್ರುವರಿ 1, 3, 4, 5, 9 ಈ ದಿನಾಂಕಗಳಲ್ಲಿ ಕಣ್ಮರೆ ಸಂಖ್ಯೆ ಎರಡಂಕಿ ದಾಟಿದೆ. ಫೆಬ್ರುವರಿ 1 ಮತ್ತು 5ರಂದು ತಲಾ 10 ಮಕ್ಕಳು ಕಣ್ಮರೆಯಾದರೆ, ಫೆಬ್ರುವರಿ 3 ಮತ್ತು 9ರಂದು ತಲಾ 11 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಆದಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.