ADVERTISEMENT

ದೇಶದಾದ್ಯಂತ ಫೆಬ್ರುವರಿಯಿಂದ ಮೊಬೈಲ್ ನಂಬರ್ ಪೋರ್ಟಬಿಲಿಟಿ ಸೇವೆ- ಸಿಬಲ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:05 IST
Last Updated 13 ಡಿಸೆಂಬರ್ 2012, 10:05 IST

ನವದೆಹಲಿ (ಪಿಟಿಐ): ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಮ್‌ಎನ್‌ಪಿ)  ಸೇವೆಯು ಮುಂದಿನ ವರ್ಷದ ಫೆಬ್ರುವರಿಯಿಂದ ದೇಶದಾದ್ಯಂತ ಜಾರಿಗೆ ಬರುವ ನಿರೀಕ್ಷೆಯಿದ್ದು ಇದರಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಅವರು ಗುರುವಾರ ಹೇಳಿದರು.

`ರಾಷ್ಟ್ರೀಯ ದೂರಸಂಪರ್ಕ ನೀತಿ (ಎನ್‌ಟಿಪಿ) 2012 ಅನ್ನು ಕಾಲಮಿತಿಯೊಳಗಡೆ ಜಾರಿಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಮುಂದಿನ ಮೂರು ತಿಂಗಳಲ್ಲಿ (2012ರ ಡಿಸೆಂಬರ್‌ನಿಂದ 2013ರ ಫೆಬ್ರುವರಿವರೆಗೆ) ಜಾರಿಗೆ ತರುವ ಕಾರ್ಯಕ್ರಮಗಳ ಅಂತೀಮ ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ ಎಂದು ಸಿಬಲ್ ತಿಳಿಸಿದರು.

ತರಂಗಾಂತರ ಹಂಚಿಕೆಯ ಅನುಮೋದನೆ, ದರ ನಿರ್ಧಾರ, ಏಕೀಕೃತ ಪರವಾನಗಿ ವಿಧಾನ, ಎಮ್ ಮತ್ತು ಎ ಮಾರ್ಗಸೂಚಿ, ಹಾಗೂ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಅಂತೀಮ ಮಾರ್ಗಸೂಚಿ ತಯಾರಿ, ಗ್ರಾಮೀಣಾಭಿವೃದ್ಧಿಗೆ ನಿಧಿ ಸೃಷ್ಟಿ ಸೇರಿದಂತೆ ಎಮ್‌ಎನ್‌ಪಿ ಸೇವೆಯು ಅನುಮೋದನೆಗಾಗಿ ಕಾಯ್ದಿದ್ದು, ಇವೆಲ್ಲವುಗಳು 2013ರ ಫೆಬ್ರುವರಿ ಒಳಗಡೆ ಸಂಪೂರ್ಣ ಅನಮೋದನೆ ಪಡೆಯಲಿವೆ ಎಂದರು.

ಪ್ರಸ್ತುತ ಒಂದೇ ವೃತ್ತದಲ್ಲಿ ಗ್ರಾಹಕರಿಗೆ ಮೊಬೈಲ್ ನಂಬರ್‌ಗಳನ್ನು ಬೇರೆ ಕಂಪೆನಿಗಳಿಗೆ ಬದಲಾವಣೆ ಮಾಡಿಕೊಳ್ಳುವ ಸೌಲಭ್ಯವಿದ್ದು, ರಾಷ್ಟ್ರೀಯ ದೂರಸಂಪರ್ಕ ನೀತಿ (ಎನ್‌ಟಿಪಿ) 2012 ಜಾರಿಗೆ ಬಂದರೆ ಅದರಿಂದ ಅಂತರ ರಾಜ್ಯಗಳ ವೃತ್ತಗಳಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.