ADVERTISEMENT

ದೇಶದ ಶ್ರೇಷ್ಠ ಪುತ್ರ ನೇತಾಜಿ: ಪ್ರಣವ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:59 IST
Last Updated 20 ಜನವರಿ 2013, 19:59 IST
ಕೋಲ್ಕತ್ತದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 116ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದ ನೇತಾಜಿ ಅವರ ಮಗಳು ಅನಿತಾ ಬೋಸ್ ಪಾಫ್ (ಬಲಬದಿ) ಹಾಗೂ ಅವರ ಪತಿ ಮಾರ್ಟಿನ್ ಮಧ್ಯೆ ಸಂಬಂಧಿ ಕೃಷ್ಣಾ ಬೋಸ್ 	-ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 116ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದ ನೇತಾಜಿ ಅವರ ಮಗಳು ಅನಿತಾ ಬೋಸ್ ಪಾಫ್ (ಬಲಬದಿ) ಹಾಗೂ ಅವರ ಪತಿ ಮಾರ್ಟಿನ್ ಮಧ್ಯೆ ಸಂಬಂಧಿ ಕೃಷ್ಣಾ ಬೋಸ್ -ಪಿಟಿಐ ಚಿತ್ರ   

ಕೋಲ್ಕತ್ತ (ಪಿಟಿಐ):  ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಯುವ ಜನತೆಗೆ ಮಾದರಿ ಎಂದು ಹೇಳಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅವರು ನೀಡಿರುವ ಹಲವು ಕೊಡುಗೆಗಳನ್ನು ಸ್ಮರಿಸಿದರು.

ನೇತಾಜಿ ಅವರು ಯುವ ಜನತೆಗೆ ಮಾದರಿ. ಅವರು ದೇಶದ ಶ್ರೇಷ್ಠ ಮಗ. ತಮ್ಮ ಜೀವನವನ್ನು ದೇಶ ಸೇವೆಗಾಗಿ ಹಾಗೂ ತ್ಯಾಗಕ್ಕಾಗಿ ಮುಡುಪಾಗಿಟ್ಟವರು ಎಂದು ನೇತಾಜಿ ಅವರ 116 ನೆಯ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

ನೇತಾಜಿ ಅವರ ಪೂರ್ವಿಕರ ನಿಲಯ `ನೇತಾಜಿ ಭವನ್' ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾಜಿ ಅವರ ಮಗಳು ಅನಿತಾ ಬೋಸ್ ಪಾಫ್ ಹಾಗೂ ಅವರ ಪತಿ ಮಾರ್ಟಿನ್ ಪಾಫ್ ಹಾಗೂ  ಸಂಬಂಧಿ ಕೃಷ್ಣಾ ಬೋಸ್ ಕೂಡ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.