ADVERTISEMENT

ನಕ್ಸಲ್‌ಪ್ರದೇಶ : ರಸ್ತೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ನಕ್ಸಲ್‌ ಪ್ರಾಬ­ಲ್ಯದ ಪ್ರದೇಶಗಳಲ್ಲಿ ರಸ್ತೆ ನಿರ್ಮಿ­ಸಲು ಗುತ್ತಿಗೆ­­ದಾರರು ಹಿಂಜರಿ­ಯು­­ತ್ತಿ­ರುವು­ದರಿಂದ ಇದೇ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌­ಪಿಎಫ್‌) ಆ ಭಾಗ­­ದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧ­ರಿಸಿದೆ.

ನಕ್ಸಲ್‌ ಹಿಡಿತವಿರುವ ಛತ್ತೀಸ­­ಗಡದ ಸುಕ್ಮಾದಲ್ಲಿ ಏಳು ಕಿಲೋ ಮೀಟರ್‌ ರಸ್ತೆ  ನಿರ್ಮಿಸುವ ಜವಾಬ್ದಾರಿಯನ್ನು ಸಿಆರ್‌ಪಿಎಫ್‌ ಹೊತ್ತುಕೊಂಡಿದೆ.
ಈ ಕಾಮಗಾರಿಯ ಟೆಂಡರ್‌  ಮತ್ತು ಹಕ್ಕು ಪಡೆಯಲು ಸಿಆರ್‌ಪಿಎಫ್‌ ಶೀಘ್ರ­ದಲ್ಲೇ ಅರ್ಜಿ ಸಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.