ADVERTISEMENT

ನಕ್ಸಲ್ ದಾಳಿ: ಸುಕ್ಮಾ ಜಿಲ್ಲಾಧಿಕಾರಿಯ ಅಪಹರಣ, ಅಂಗರಕ್ಷಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 12:45 IST
Last Updated 21 ಏಪ್ರಿಲ್ 2012, 12:45 IST

ರಾಯಪುರ (ಪಿಟಿಐ): ನಕ್ಸಲೀಯರು ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಅಂಗರಕ್ಷಕರನ್ನು ಕೊಂದು ಬಳಿಕ ಮೆನನ್ ಅವರನ್ನು ಅಪಹರಿಸಿದ ಘಟನೆ ಶನಿವಾರ ಚತ್ತೀಸ್ ಗಡದ ಬಸ್ತಾರ್ ಪ್ರದೇಶದಲ್ಲಿ ಘಟಿಸಿದೆ.

ಸುಕ್ಮಾ ಜಿಲ್ಲಾಧಿಕಾರಿಯ ವಾಹನವನ್ನು ತಡೆಹಿಡಿದು ನಕ್ಸಲೀಯರು ಈ ಕೃತ್ಯ ಎಸಗಿದ್ದಾರೆ.

ಜಿಲ್ಲೆಯ ಕೇರಳಪಾಲ್ ಪ್ರದೇಶದಲ್ಲಿ ಗ್ರಾಮ್ ಸುರಾಜ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಹಿಂದಿರುಗುವಾಗ  ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದರು. 

ಸುದ್ದಿ ತಿಳಿದೊಡನೆಯೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿಷೇಕ್ ಶಾಂಡಿಲ್ಯ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.