ADVERTISEMENT

ನಟಿಗೆ ಕಾಕ್‌ಪಿಟ್ ಪ್ರವೇಶ: ಪೈಲಟ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ನವದೆಹಲಿ (ಪಿಟಿಐ): ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ದಕ್ಷಿಣ ಭಾರತದ ಚಿತ್ರನಟಿ ನಿತ್ಯಾ ಮೆನನ್ ಅವರನ್ನು ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟ ಏರ್ ಇಂಡಿಯಾದ ಇಬ್ಬರು ಪೈಲಟ್‌ಗಳನ್ನು ಅಮಾನತು ಮಾಡಲಾಗಿದೆ.

`ವಿಮಾನದಲ್ಲಿದ್ದ ಪ್ರಯಾಣಿಕರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅಮಾನತುಗೊಂಡ ಪೈಲಟ್‌ಗಳಿಬ್ಬರನ್ನು ಜಗನ್ ಎಂ ರೆಡ್ಡಿ ಮತ್ತು ಎಸ್.ಕಿರಣ ಎಂದು ಗುರುತಿಸಲಾ ಗಿದೆ. ಅವರನ್ನು  ವಿಚಾರಣೆಗೆ ಒಳಪಡಿಸಲಾಗತ್ತಿದೆ ಎಂದು  ನಾಗರಿಕ ವಿಮಾನ ಯಾನ ನಿರ್ದೇಶನಾ ಲಯದ ಅಧಿಕಾರಿಗಳು ತಿಳಿಸಿದ್ದಾರೆ.

`ಕಳೆದ ತಿಂಗಳು ನಡೆದ ಈ ಪ್ರಕರಣವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ಪೈಲಟ್‌ಗಳನ್ನು ಆಂತರಿಕ ತನಿಖೆಗೆ ಒಳಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಡಿಜಿಸಿಎ ತನಿಖೆ ನಡೆಸಿದೆ' ಎಂದು ಮೂಲಗಳು ತಿಳಿಸಿವೆ.

ವಿಮಾನವು ಹಾರಾಟ ನಡೆಸುತ್ತಿದ್ದಾಗ ಚಿತ್ರನಟಿಯೊಬ್ಬರನ್ನು ಕಾಕ್‌ಪಿಟ್‌ನಲ್ಲಿ ಬರಲು ಅವಕಾಶ ನೀಡಲಾಗಿತ್ತು. ಅಲ್ಲದೇ, ಅವರನ್ನು ಪರಿವೀಕ್ಷಕರ ಸ್ಥಾನದಲ್ಲಿ ಕುಳ್ಳಿರಿಸಲಾಗಿತ್ತು. ಈ ಸ್ಥಾನದಲ್ಲಿ ಡಿಜಿಸಿಎನ ಅಧಿಕೃತ ಪರಿವೀಕ್ಷಕರು ಮಾತ್ರ ಕುಳಿತುಕೊಳ್ಳಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.